ಬೆಳ್ತಂಗಡಿ:ಹದಿನೈದು ದಿನಗಳ ಹಿಂದೆ ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಬಂಗಾರ ಪಲ್ಕೆ ಜಲಪಾತದ ಸಮೀಪ ಗುಡ್ಡ ಕುಸಿದು ಸಂಭವಿಸಿದ ದುರಂತದ ಸಂದರ್ಭದಲ್ಲಿ ನಾಪತ್ತೆಯಾಗಿರುವ ಉಜಿರೆ ಸಮೀಪದ ಕಾಶಿಬೆಟ್ಟು ನಿವಾಸಿ ಸನತ್ ಶೆಟ್ಟಿ (20) ಎಂಬುವರ ಶೋಧಕ್ಕಾಗಿ ಮಂಗಳವಾರ ಕಾರ್ಯಾಚರಣೆ ಮುಂದುವರಿದಿದ್ದು, ಜೆಸಿಬಿ ಬಳಸಿ ಅಗೆತ ನಡೆಸಲಾಗಿದೆ.
ಜನವರಿ 25ರಂದು ಮಲವಂತಿಗೆ ಗ್ರಾಮದ ಎಳನೀರು ಸಮೀಪದ ಬಂಗಾರ್ ಪಲ್ಕೆ ಲಜಪಾತ ಬಳಿ ಗುಡ್ಡ ಕುಸಿತ ಉಂಟಾಗಿ ನಾಲ್ಕು ಜನರಲ್ಲಿ ಮೂರು ಮಂದಿ ಪಾರಾಗಿ ಉಜಿರೆ ಸಮೀಪದ ಕಾಶಿಬೆಟ್ಟು ನಿವಾಸಿ ಸನತ್ ಶೆಟ್ಟಿ ಎಂಬಾತ ಕಣ್ಮರೆಯಾಗಿದ್ದ. ಆತನ ಪೋಷಕರ ಕೋರಿಕೆಯ ಮೇರೆಗೆ ದೇಹ ಪತ್ತೆಗಾಗಿ ಕಳೆದ ಹದಿನೈದು ದಿನಗಳಿಂದ ಎಸ್ಡಿಆರ್ಎಫ್, ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ, ಹಲವು ಸಂಘ ಸಂಸ್ಥೆಗಳು ಅವಿರತವಾಗಿ ಹುಡುಕುವ ಪ್ರಯತ್ನ ಪಡುತಿದ್ದರೂ ಯಾವುದೇ ಸುಳಿವು ಸಿಗದಿರುವುದು ಅತಂಕಕ್ಕೆ ಕಾರಣವಾಗಿದೆ.