ಸುಳ್ಯ:ಇಲ್ಲಿನಶಾರದಾ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಸೋನಿಯಾ (18) ಕುರುಂಜಿಭಾಗ್ ಸಮೀಪದ ಬಿಸಿಎಂ ಹಾಸ್ಟೆಲ್ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಕೆ ಬೆಂಗಳೂರು ರಾಮನಾಥ ಪುರದ ಕಾರಮಂಗಲ ಮಾರ್ಲಮಂಗಲ ಗ್ರಾಮದ ಪುರುಷೋತ್ತಮ-ರೀನಾ ದಂಪತಿಯ ಪುತ್ರಿ.
ಸೋನಿಯಾ ನಿನ್ನೆ ಕಾಲೇಜಿಗೆ ಹೋಗದೇ ಹಾಸ್ಟೇಲ್ನಲ್ಲಿಯೇ ಉಳಿದುಕೊಂಡಿದ್ದರು. ಆಕೆಯ ಕೊಠಡಿಯಲ್ಲಿದ್ದ ಊಟದ ತಟ್ಟೆ ತರಲೆಂದು ಸಹಪಾಠಿ ಹೋದಾಗ ಬಾಗಿಲು ಹಾಕಿಕೊಂಡಿತ್ತು. ಬಾಗಿಲನ್ನು ಎಷ್ಟೆ ತಟ್ಟಿದರೂ ತೆರೆಯಲಿಲ್ಲ. ಊಟ ಮುಗಿಸಿ ಮತ್ತೆ ರೂಮಿಗೆ ಬಂದಾಗಲೂ ಬಾಗಿಲು ತೆರೆಯದೇ ಇದ್ದ ಕಾರಣ ಸಂಶಯಗೊಂಡು ವಿದ್ಯಾರ್ಥಿ ನಿಲಯದ ವಾರ್ಡನ್ಗೆ ಮಾಹಿತಿ ತಿಳಿಸಲಾಗಿತ್ತು