ಕರ್ನಾಟಕ

karnataka

ETV Bharat / state

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬಿದಿರಿನ ರಥ: ರಚನೆಯ ಹಿಂದಿದೆ ಮಲೆಕುಡಿಯರ ಶ್ರಮ - Chariot by malekudi tribals of subramanya

ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಸುಬ್ರಹ್ಮಣ್ಯದಲ್ಲಿ ಕೇವಲ ಬಿದಿರು, ಮರದ ಹಲಗೆ ಹಾಗೂ ಬೆತ್ತ ಬಳಸಿ ಕೌಶಲ್ಯಭರಿತವಾಗಿ ತೇರುಗಳನ್ನು ನಿರ್ಮಿಸುವುದು ವಿಶೇಷ. ಈ ಕೌಶಲ್ಯಪೂರ್ಣ ತೇರು ತಯಾರಿಕೆಯ ಹಿಂದೆ ಆದಿವಾಸಿ ಮಲೆಕುಡಿಯ ಸಮುದಾಯದವರ ಅದ್ಭುತ ಕಲೆಗಾರಿಕೆ ಹಾಗೂ ಪರಿಶ್ರಮವಿದೆ.

Bamboo Chariot of kukke subramanya made by tribals
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬಿದಿರಿನ ರಥ

By

Published : Dec 15, 2020, 12:02 PM IST

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಠಿ ದಿನಗಳಲ್ಲಿ ನಿರ್ಮಾಣವಾಗುವ ಬ್ರಹ್ಮರಥ ಸೇರಿದಂತೆ ಇತರ ರಥಗಳ ಅಲಂಕಾರಿಕ ಕೆಲಸಗಳ ಹಿಂದೆ ಕುಕ್ಕೆ ಸುಬ್ರಹ್ಮಣ್ಯದ ಮೂಲ ನಿವಾಸಿಗಳಾದ ಆದಿವಾಸಿ ಮಲೆಕುಡಿಯ ಜನಾಂಗದ ಅವಿರತ ಶ್ರಮವಿದೆ.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬಿದಿರಿನ ರಥ

ಹಗ್ಗ ಬಳಸದೆ, ಗಂಟು ಬಿಗಿಯದೆ ಮಲೆ ಕುಡಿಯರು ರಥ ನಿರ್ಮಾಣ ಮಾಡುತ್ತಾರೆ. ಕಾಡುಗಳಿಂದ ಸಂಗ್ರಹಿಸಿದ ಬೆತ್ತಗಳನ್ನು ಬಳಸಿ, ಹಗ್ಗವನ್ನು ಬಳಸದೆ ಬೆತ್ತದಿಂದ ತೇರನ್ನು ರಚಿಸುವುದನ್ನು ಮೂಲನಿವಾಸಿಗಳಿಗೆ ಕರಗತವಾದ ಒಂದು ವಿಶೇಷ ಕಲೆ.

ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಪಾರಂಪರಿಕ ಮತ್ತು ಜನಪದೀಯ ಶೈಲಿಯಲ್ಲಿ ರಚಿಸಲಾಗುವ ರಥ ನಿರ್ಮಾಣ ಮತ್ತು ಅಲಂಕಾರಿಕ ಕೆಲಸಗಳಿಗೆ, ಮಾರ್ಗಶಿರ ಶುದ್ಧ ಪೌರ್ಣಮಿಯಂದು, ಸಹಸ್ರ ನಾಮಾರ್ಚನೆ ಬಳಿಕ ದೇಗುಲದ ಪ್ರಧಾನ ಅರ್ಚಕರು ಚಾಲನೆ ನೀಡುತ್ತಾರೆ. ರಥ ಮುಹೂರ್ತದ ಬಳಿಕ ಮಲೆಕುಡಿಯರು ವೀಳ್ಯವನ್ನು ಸ್ವೀಕರಿಸಿ ಕಾಡಿಗೆ ತೆರಳುತ್ತಾರೆ. ರಥ ನಿರ್ಮಾಣಕ್ಕೆ ಬೇಕಿರುವ ಬೆತ್ತಗಳನ್ನು ಸಂಗ್ರಹಿಸಿ, ಬ್ರಹ್ಮರಥವನ್ನು ಕಟ್ಟಲು ಆರಂಭಿಸುತ್ತಾರೆ. ನಾಡಿನ ಇತರೆ ದೇವಸ್ಥಾನಗಳಲ್ಲಿ ರಥವನ್ನು ಹಗ್ಗಗಳಿಂದ ರಚಿಸಿದರೆ, ಸುಬ್ರಹ್ಮಣ್ಯದಲ್ಲಿ ಮಾತ್ರ ಕೇವಲ ಬಿದಿರು, ಮರದ ಹಲಗೆ ಹಾಗೂ ಬೆತ್ತವನ್ನು ಬಳಸಿ ಕೌಶಲ್ಯಭರಿತವಾಗಿ ತೇರುಗಳನ್ನು ನಿರ್ಮಿಸಲಾಗುತ್ತೆ.

ಭಾರಿ ಗಾತ್ರದ ಬೆತ್ತವನ್ನು ತಂದು ಎಂಟು ಆಕಾರದಲ್ಲಿ ರಥದ ಮೇಲ್ಭಾಗಕ್ಕೆ ಬಿಗಿದು, ರಥದ ಅಟ್ಟೆಯನ್ನು ಬಿದಿರು ಹಾಗೂ ಬೆತ್ತಗಳಿಂದ ರಚಿಸುತ್ತಾರೆ. ಇಲ್ಲಿ ಯಾವುದೇ ಗಂಟುಗಳನ್ನು ಹಾಕಲಾಗುವುದಿಲ್ಲ. ಬೆತ್ತವನ್ನು ಪೋಣಿಸಿ ರಥವನ್ನು ಗಟ್ಟಿ ಮಾಡಲಾಗುತ್ತದೆ. ರಥದ ಸುತ್ತ ವರ್ಣ ಪತಾಕೆಗಳಿಂದ ಅಲಂಕರಿಸುತ್ತಾರೆ. ರಥ ನಿರ್ಮಾಣ ಕಾರ್ಯದಲ್ಲಿ 20 ಯುವಕರು, 30 ಹಿರಿಯರು ಸೇರಿದಂತೆ ಒಟ್ಟು 50 ಜನರು ಸೇರಿ ಅಲಂಕಾರಿಕ ಕೆಲಸಗಳನ್ನು ಮಾಡುತ್ತಾರೆ.

ಓದಿ: ಸಿಗಂದೂರು ದೇವಸ್ಥಾನ ವಿವಾದ : ಯಥಾಸ್ಥಿತಿ ಕಾಯ್ದುಕೊಳ್ಳಲು ಹೈಕೋರ್ಟ್ ಸೂಚನೆ

ABOUT THE AUTHOR

...view details