ದಕ್ಷಿಣ ಕನ್ನಡ :ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿರುವ ಕಡಬ ತಾಲೂಕಿನ ಬಲ್ಯ ಗ್ರಾಮದ ದೇರಾಜೆ 2ನೇ ವಾರ್ಡಿನ ಸಂಪಡ್ಕ ಪ.ಜಾತಿ ಕಾಲೋನಿಯ ನಿವಾಸಿಗಳು ಬೇಡಿಕೆ ಈಡೇರದಿದ್ದರೆ ಚುನಾವಣೆ ಬಹಿಷ್ಕರಿಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಬೇಡಿಕೆ ಈಡೇರಿಕೆಗಾಗಿ ಚುನಾವಣೆ ಬಹಿಷ್ಕರಿಸಲು ಮುಂದಾದ ಬಲ್ಯ ಗ್ರಾಮಸ್ಥರು - ಬಲ್ಯ ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರ
ಕುಡಿಯುವ ನೀರು, ರಸ್ತೆ, ಶೌಚಾಲಯದಂತಹ ಮೂಲಸೌಕರ್ಯ ಕಲ್ಪಿಸದಿರೋದು, ಪರಿಶಿಷ್ಠ ಜಾತಿಯ ರುದ್ರಭೂಮಿಯ ಅಭಿವೃದ್ದಿ ಮಾಡದಿರುವುದು ಇಲ್ಲಿನ ನಿವಾಸಿಗಳ ಆಕ್ರೋಶಕ್ಕೆ ಕಾರವಾಗಿದೆ..
ಬಲ್ಯ ಗ್ರಾಮ
ಕಾಲೋನಿಯ ಸುಮಾರು 15 ಕುಟುಂಬಗಳು ಮತದಾನ ಬಹಿಷ್ಕಾರಕ್ಕೆ ಮುಂದಾಗಿವೆ. ಕುಡಿಯುವ ನೀರು, ರಸ್ತೆ, ಶೌಚಾಲಯದಂತಹ ಮೂಲಸೌಕರ್ಯ ಕಲ್ಪಿಸದಿರೋದು, ಪರಿಶಿಷ್ಠ ಜಾತಿಯ ರುದ್ರಭೂಮಿಯ ಅಭಿವೃದ್ದಿ ಮಾಡದಿರುವುದು ಇಲ್ಲಿನ ನಿವಾಸಿಗಳ ಆಕ್ರೋಶಕ್ಕೆ ಕಾರವಾಗಿದೆ.
ಅಲ್ಲದೆ, ಕಾಲೋನಿ ಹೆಸರಿನಲ್ಲಿ ಬೇರೆಡೆ ಸೌಲಭ್ಯಗಳನ್ನು ಒದಗಿಸಿರುವುದಾಗಿ ಆರೋಪಿಸಿರುವ ನಿವಾಸಿಗಳು ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದಾರೆ.