ಮಂಗಳೂರು:ತನ್ನ ಮೇಲೆ ಯುವಕನೊಬ್ಬನಿಂದ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ದೂರು ನೀಡಲು ಹೋದ ಅಪ್ರಾಪ್ತೆಯ ಮೇಲೆಯೇ ನಗರದ ಬಜ್ಪೆ ಠಾಣಾ ಮಹಿಳಾ ಪೊಲೀಸರು ಹಲ್ಲೆ ನಡೆಸಿದ್ದಾರೆ.
ದೂರು ದಾಖಲಿಸಲು ಹೋದ ಅಪ್ರಾಪ್ತೆಯ ಮೇಲೆ ಪೊಲೀಸರಿಂದಲೇ ಹಲ್ಲೆ: ಮೂವರ ವಿರುದ್ಧ ಪ್ರಕರಣ ದಾಖಲು.. - Bajpe station police sliced on women
ಫೇಸ್ ಬುಕ್ ಮೂಲಕ ಪರಿಚಯವಾದ ಯುವಕನೊಬ್ಬನಿಂದ ಲೈಂಗಿಕ ದೌರ್ಜನ್ಯವಾಗಿದೆ ಎಂದು ದೂರು ನೀಡಲು ಹೋದ ಬಾಲಕಿಯ ಮೇಲೆ ಮಂಗಳೂರು ನಗರದ ಬಜ್ಪೆ ಠಾಣಾ ಮಹಿಳಾ ಪೊಲೀಸರು ಹಲ್ಲೆ ಮಾಡಿದ್ದಾರೆ.

ತಮಗೆ ನ್ಯಾಯ ದೊರಕಿಸುವಂತೆ ದೌರ್ಜನ್ಯಕ್ಕೊಳಗಾದ ಬಾಲಕಿಯ ಹೆತ್ತವರು ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಜ್ಪೆ ಠಾಣೆಯ ಮೂವರು ಮಹಿಳಾ ಪೊಲೀಸರ ವಿರುದ್ಧ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ವಿವರ: ನಗರದ ಹೊರವಲಯದಲ್ಲಿರುವ ಗಂಜಿಮಠ ಬಡಗ ಉಳಿಪಾಡಿ ಬಳಿಯ ನಿವಾಸಿ ವಾಣಿ (ಹೆಸರು ಬದಲಾಯಿಸಲಾಗಿದೆ) ಎಂಬ ವಿದ್ಯಾರ್ಥಿನಿಗೆ ಮೂಡುಬಿದಿರೆ ಇರುವೈಲು ನಿವಾಸಿ ಶ್ರೀಕಾಂತ್ ನಾಗೇಶ್ ಎಂಬಾತ ಫೇಸ್ ಬುಕ್ ಮೂಲಕ ಪರಿಚಯವಾಗಿದ್ದಾನೆ. ಈತನು ಆಕೆಗೆ ದೂರವಾಣಿ ಮೂಲಕ ಕರೆ ಮಾಡಿ ತನ್ನನ್ನು ಮದುವೆಯಾಗು ಎಂದು ಪೀಡಿಸುತ್ತಿರುವುದಲ್ಲದೆ ಮನೆಗೂ ಬಂದು ದೌರ್ಜನ್ಯ ಎಸಗಿದ್ದಾನೆ. ಈ ಬಗ್ಗೆ ಬಾಲಕಿಯ ಹೆತ್ತವರು ತಮ್ಮ ಮಗಳಿಗೆ ತೊಂದರೆ ಕೊಡಬೇಡ, ಮನೆಗೆ ಬರುವುದು ಬೇಡ ಎಂದು ಎಷ್ಟು ಬುದ್ಧಿವಾದ ಹೇಳಿದರೂ ಆತ ತನ್ನ ಚಾಳಿ ಬಿಟ್ಟಿರಲಿಲ್ಲ.