ಮಂಗಳೂರು:ಹಸುವನ್ನು ಕಳ್ಳತನ ಮಾಡಿ ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರಿನ ಬಜಪೆ ಪೊಲೀಸರು ಬಂಧಿಸಿದ್ದಾರೆ.
ಅಡ್ಡೂರು ಗ್ರಾಮದ ಪಾಂಡೇಲು ಗದ್ದೆಯ ಅಬ್ದುಲ್ ಮಜೀದ್ (35) ಮತ್ತು ಪಿ.ಮುಸ್ತಾಫ (30) ಬಂಧಿತರು. ಇವರು ಅಡ್ಡೂರಿನಲ್ಲಿ ಹಸುವನ್ನು ಕಳವು ಮಾಡಿಕೊಂಡು ಬಂದು ಅಕ್ರಮವಾಗಿ ಗೋಮಾಂಸವನ್ನು ಮಾರಾಟ ಮಾಡುತ್ತಿದ್ದರು. ಈ ಕುರಿತಂತೆ ಮಾಹಿತಿ ಪಡೆದ ಬಜಪೆ ಪೊಲೀಸರು ದಾಳಿ ನಡೆಸಿದ್ದಾರೆ.