ಪುತ್ತೂರು :ಹಲ್ಲೆ ಆರೋಪದಡಿ ಇಂದು ಬೆಳಗ್ಗೆ ಸಂಪ್ಯ ಠಾಣೆಗೆ ಶರಣಾಗಿದ್ದ ನಟ ವಿನೋದ್ ಆಳ್ವಗೆ ಮಧ್ಯಾಹ್ನದ ವೇಳೆಗೆ ನ್ಯಾಯಾಲಯ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಪಡವನ್ನೂರು ಗ್ರಾಮದ ಕೊರಗಪ್ಪ ನಾಯ್ಕ್ ಎಂಬುವರು ಜಾತಿ ನಿಂದನೆ ಆರೋಪದಡಿ ನಟ ವಿನೋದ್ ಆಳ್ವ ವಿರುದ್ಧ ಸಂಪ್ಯ ಠಾಣೆಗೆ ದೂರು ನೀಡಿದ್ದರು. ವಿನೋದ್ ಆಳ್ವ ಪಡುಮಲೆಯ ನಾಗಬ್ರಹ್ಮ ದೇವಸ್ಥಾನದ ರಸ್ತೆ ಕಾಮಗಾರಿ ಮಾಡಿಸುತ್ತಿದ್ದರು. ಈ ವೇಳೆ ಅದೇ ರಸ್ತೆಯಲ್ಲಿ ಹೋಗುತ್ತಿದ್ದ ನಾನು, ನೀರಿನ ಪೈಪ್ ಒಡೆದು ಮನೆಗಳಿಗೆ ನೀರು ಬರುತ್ತಿಲ್ಲ ಎಂದು ಅವರಿಗೆ ಹೇಳಿದ್ದೆ.
ಈ ವೇಳೆ ಅವರು, ನೀರು ಬಾರದಿದ್ದರೆ ನನ್ನಲ್ಲಿ ಕೇಳುವುದಲ್ಲ ಎಂದು ಗದರಿಸಿ ಹಲ್ಲೆ ನಡೆಸಿದರು. ಅವರ ಜೊತೆಯಲ್ಲಿದ್ದ ದೀಕ್ಷಿತ್ ಕೂಡ ನನ್ನ ಮೇಲೆ ಹಲ್ಲೆ ನಡೆಸಿದರು. ನಾನು ಪರಿಶಿಷ್ಟ ಪಂಗಡಕ್ಕೆ ಸೇರಿದವನೆಂದು ತಿಳಿದಿದ್ದರೂ ವಿನೋದ್ ಆಳ್ವ ಮತ್ತು ದೀಕ್ಷಿತ್ ಅವರು ಉದ್ದೇಶ ಪೂರ್ವಕವಾಗಿ ನನಗೆ ಹಲ್ಲೆ ನಡೆಸಿ, ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ಉದಯ್ ಠಾಣೆಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.