ಮಂಗಳೂರು:ನಮೀಬಿಯಾದಿಂದ ತರಿಸಲಾದ ಚೀತಾ ಗರ್ಭಿಣಿಯಾದ ವಿಚಾರದಲ್ಲಿ ಫೇಸ್‌ಬುಕ್ ಪೋಸ್ಟ್ ಹಾಕಿ ಬಂಧನಕ್ಕೊಳಗಾದ ಮಂಗಳೂರಿನ ಸಾಮಾಜಿಕ ಕಾರ್ಯಕರ್ತ ಸುನಿಲ್ ಬಜಿಲಕೇರಿಯನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ.
ಸಾಮಾಜಿಕ ಕಾರ್ಯಕರ್ತ ಸುನೀಲ್ ಬಜಿಲಕೇರಿ ಅವರು ಚಿರತೆ ಚಿತ್ರ ಬಳಸಿ ಗರ್ಭಿಣಿಗೆ ಅವಹೇಳನ ಮಾಡಿದ್ದಾರೆ ಎಂಬ ಆರೋಪದಡಿ ನಿನ್ನೆ ಮಧ್ಯರಾತ್ರಿ ಬಂಧಿಸಲಾಗಿತ್ತು. ಸುನೀಲ್ ಬಜಿಲಕೇರಿ ಅವರು ಫೇಸ್‌ಬುಕ್‌ನಲ್ಲಿ 'ನಮೀಬಿಯಾ ಚೀತಾಗೆ ಸೀಮಂತ ಯಾವಾಗ?' ಅಂತ ಪೋಸ್ಟ್ ಮಾಡಿ ಗರ್ಭಿಣಿಯ ಫೋಟೋಗೆ ಚೀತಾದ ಮುಖ ಎಡಿಟ್ ಮಾಡಿ ಪೋಸ್ಟ್ ಹಾಕಿದ್ದರು ಎನ್ನಲಾಗಿದೆ.