ಕರ್ನಾಟಕ

karnataka

ETV Bharat / state

ನಾದಿನಿ ಮೇಲೆ ಆ್ಯಸಿಡ್ ಎರಚಿದ ಪ್ರಕರಣ.. ಜಾಮೀನು ಅರ್ಜಿ ವಜಾ ಹಿನ್ನೆಲೆ ಕೋರ್ಟ್‌ಗೆ ಶರಣಾದ ಆರೋಪಿ

2020ನೇ ಜನವರಿ 24ರಂದು ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ಕೊಠಾರಿ ಎಂಬಲ್ಲಿ ಜಯಾನಂದ್ ತನ್ನ ತಮ್ಮನ ಹೆಂಡತಿ ಸ್ವಪ್ನಾ ಎಂಬುವರಿಗೆ ಮತ್ತು ಅವರ ಜೊತೆಗಿದ್ದ ಪುಟ್ಟ ಮಗುವಿನ ಮೇಲೆ ಆ್ಯಸಿಡ್ ಎರಚಿದ್ದ..

Bail application dismissed By supreme court acid attacker  surrender  to court
ನಾದಿನಿ ಮೇಲೆ ಆ್ಯಸಿಡ್ ಎರಚಿದ ಪ್ರಕರಣ

By

Published : Mar 29, 2021, 9:52 PM IST

ಕಡಬ (ದಕ್ಷಿಣ ಕನ್ನಡ): ಕಡಬದ ಕೋಡಿಂಬಾಳಯಲ್ಲಿ ಕಳೆದ ವರ್ಷ ನಡೆದ ಆ್ಯಸಿಡ್ ದಾಳಿ ಪ್ರಕರಣದ ಆರೋಪಿ ಜಯಾನಂದ್​ ನ್ಯಾಯಾಲಯಕ್ಕೆ ಶರಣಾಗಿದ್ದಾನೆ. ತನ್ನ ಸ್ವಂತ ನಾದಿನಿಗೆ ಮತ್ತು ಪುಟ್ಟ ಮಗುವಿನ ಮೇಲೆ ಆ್ಯಸಿಡ್ ದಾಳಿ ನಡೆಸಿ ಜೈಲಿನಲ್ಲಿದ್ದ ಈತ ಜಾಮೀನು ಮೇಲೆ ಹೊರ ಬಂದಿದ್ದ.

ಬಳಿಕ ಈ ಜಾಮೀನು ಪ್ರಶ್ನಿಸಿ ಸಂತ್ರಸ್ತೆ ಹೈಕೋರ್ಟ್​ ಮೆಟ್ಟಿಲೇರಿದ್ದರು. ಈ ಕುರಿತು ಹೈಕೋರ್ಟ್​ ಜಾಮೀನು ನೀಡಿರುವುದನ್ನು ತಿರಸ್ಕರಿಸಿ ಆತನನ್ನು ಕೂಡಲೇ ಬಂಧಿಸುವಂತೆ ಆದೇಶಿಸಿತ್ತು.

ಈ ಆದೇಶ ಹೊರಬೀಳುತ್ತಿದ್ದಂತೆ ಎಚ್ಚೆತ್ತ ಆರೋಪಿ ಜಯಾನಂದ್ ಸುಪ್ರೀಂಕೋರ್ಟ್​​ನಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ. ಈ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್​, ಹೈಕೋರ್ಟ್​ ಆದೇಶ ಎತ್ತಿಹಿಡಿದಿದೆ. ಈ ಹಿನ್ನೆಲೆ ಆರೋಪಿ ಇದೀಗ ನ್ಯಾಯಾಲಯಕ್ಕೆ ಶರಣಾಗಿದ್ದಾನೆ.

ಏನಿದು ಪ್ರಕರಣ?:2020ನೇ ಜನವರಿ 24ರಂದು ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ಕೊಠಾರಿ ಎಂಬಲ್ಲಿ ಜಯಾನಂದ್ ತನ್ನ ತಮ್ಮನ ಹೆಂಡತಿ ಸ್ವಪ್ನಾ ಎಂಬುವರಿಗೆ ಮತ್ತು ಅವರ ಜೊತೆಗಿದ್ದ ಪುಟ್ಟ ಮಗುವಿನ ಮೇಲೆ ಆ್ಯಸಿಡ್ ಎರಚಿದ್ದ.

ಇದರಿಂದ ಸ್ವಪ್ನಾ ಹಾಗೂ ಅವರ ಮಗುವಿಗೆ ಗಾಯವಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿದ್ದ ಜಯಾನಂದ್‌ಗೆ ಪುತ್ತೂರು ನ್ಯಾಯಾಲಯದಲ್ಲಿ ಜಾಮೀನು ಮಂಜೂರಾಗಿತ್ತು.

ಆದರೆ, ಈ ಜಾಮೀನನ್ನು ಪ್ರಶ್ನಿಸಿ ಸ್ವಪ್ನಾ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಬಳಿಕ ಹೈಕೋರ್ಟ್ ಜಾಮೀನು ನೀಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ ಕೂಡಲೇ ಜಯಾನಂದನನ್ನು ಬಂಧಿಸುವಂತೆ ಕಡಬ ಪೊಲೀಸರಿಗೆ ಆದೇಶಿಸಿತ್ತು.

ಈ ಮಧ್ಯೆ ಆರೋಪಿ ಜಯಾನಂದ್ ತಲೆಮರೆಸಿಕೊಂಡಿದ್ದ. ಇದೀಗ ಜಯಾನಂದ್ ನೇರ ನ್ಯಾಯಾಲಯಕ್ಕೆ ಶರಣಾಗಿದ್ದಾನೆ. ನ್ಯಾಯಾಲಯವು ಜಯಾನಂದ್‌ನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಇದನ್ನೂ ಓದಿ:ಸಿಡಿ ಪ್ರಕರಣದ ಯುವತಿ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಪತ್ರ.. 'ನೋ ಕಮೆಂಟ್ಸ್'ಎಂದ ಬೊಮ್ಮಾಯಿ

ABOUT THE AUTHOR

...view details