ಕರ್ನಾಟಕ

karnataka

ETV Bharat / state

ವಿಟ್ಲ: ತೋಟದಲ್ಲಿ ಆಡುತ್ತಿದ್ದ ವೇಳೆ ಕೆರೆಗೆ ಬಿದ್ದ ಮಗು ಸಾವು - Mangalore baby death news

ತೋಟದಲ್ಲಿ ಮಕ್ಕಳು ಆಟ ಆಡುತ್ತಿದ್ದ ವೇಳೆ ಕೆರೆಗೆ ಬಿದ್ದು ಬಾಲಕಿಯೊಬ್ಬಳು ಮೃತಪಟ್ಟ ಘಟನೆ ವಿಟ್ಲ ಎಂಬಲ್ಲಿ ನಡೆದಿದೆ.

Vittal
ಕೆರೆಗೆ ಬಿದ್ದ ಮಗು ಸಾವು

By

Published : Jan 11, 2021, 1:46 PM IST

ವಿಟ್ಲ(ಮಂಗಳೂರು): ತೋಟದಲ್ಲಿ ಮಕ್ಕಳು ಆಟ ಆಡುತ್ತಿದ್ದ ವೇಳೆ ಕೆರೆಗೆ ಬಿದ್ದು ಬಾಲಕಿಯೊಬ್ಬಳು ಮೃತಪಟ್ಟ ಘಟನೆ ವಿಟ್ಲ ಸಮೀಪದ ಕೊಳ್ನಾಡು ಗ್ರಾಮದ ಸೆರ್ಕಳ ಎಂಬಲ್ಲಿ ನಡೆದಿದೆ.

ಕೊಳ್ನಾಡು ಗ್ರಾಮದ ಸೆರ್ಕಳ ನಿವಾಸಿ ಹಂಝ ಅವರ ಪುತ್ರಿ ಸರಪುನ್ನಿಸಾ(4) ಮೃತಪಟ್ಟ ಬಾಲಕಿ. ಹಂಝ ಅವರ ಮಕ್ಕಳಾದ ರಸೀದ್, ಬದ್ರುದ್ದೀನ್ಮ ಮತ್ತು ಸರಪುನ್ನಿಸಾ ಅವರು ಅಬ್ಬಾಸ್ ಬಾಕಿಮಾರು ಎಂಬವರ ತೋಟಕ್ಕೆ ಆಟ ಆಡಲು ತೆರಳಿದ್ದರು. ಆಡುತ್ತಿರುವಾಗ ಮೂವರ ಪೈಕಿ ಸರಪುನ್ನಿಸಾ ತೋಟದ ಮಧ್ಯದಲ್ಲಿದ್ದ ಕೆರೆಗೆ ಕಾಲು ಜಾರಿ ಬಿದ್ದಿದ್ದಾಳೆ. ಘಟನೆ ನಡೆದ ತಕ್ಷಣ ರಸೀದ್ ಹಾಗೂ ಬದ್ರುದ್ದೀನ್ ಮನೆಯವರಿಗೆ ವಿಷಯ ತಿಳಿಸಿದ್ದಾರೆ.

ಮನೆ ಮಂದಿ ಕೆರೆಯ ಬಳಿಗೆ ಹೋದಾಗ ಸರಪುನ್ನಿಸಾ ನೀರಿನಲ್ಲಿ ಮುಳುಗಿರುವುದು ಕಂಡು ಬಂದಿದೆ. ಸ್ಥಳೀಯರ ಸಹಕಾರದೊಂದಿಗೆ ಆಕೆಯನ್ನು ನೀರಿನಿಂದ ಹೊರಗೆ ತೆಗೆದು ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಆ್ಯಂಬುಲೆನ್ಸ್​ ಮೂಲಕ ಕರೆದುಕೊಂಡು ಹೋಗಲಾಗಿದೆ. ಆದರೆ ವೈದ್ಯಾಧಿಕಾರಿಗಳು ಮಗುವನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ.

ಘಟನೆ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details