ಕರ್ನಾಟಕ

karnataka

ETV Bharat / state

ಚಡ್ಡಿ ಹಾಕಿ ದೇಶ ಕಾಪಾಡುತ್ತೇವೆ ಎಂದು ಯೋಧರಿಗೆ ಅವಮಾನ ಮಾಡಿದ RSS : ಬಿ. ಕೆ ಹರಿಪ್ರಸಾದ್ - ಆರ್​ಎಸ್​ಎಸ್​ ಬಗ್ಗೆ ಬಿ ಕೆ ಹರಿಪ್ರಸಾದ್​ ಮಂಗಳೂರಿನಲ್ಲಿ ಆಕ್ರೋಶ

ಆರ್​ಎಸ್​ಎಸ್​ ನವರು ದೇಶ ರಕ್ಷಿಸುತ್ತೇವೆ ಎನ್ನುತ್ತಾ ರಾಷ್ಟ್ರದಲ್ಲಿರುವ 50 ಲಕ್ಷ ಮಂದಿ ಸೈನಿಕರು, ಪೊಲೀಸರು, ಪ್ಯಾರಾ ಮಿಲಿಟರಿ ಯೋಧರಿಗೆ ಅವಮಾನ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ. ಕೆ ಹರಿಪ್ರಸಾದ್ ಹರಿಹಾಯ್ದಿದ್ದಾರೆ.

ಬಿ. ಕೆ ಹರಿಪ್ರಸಾದ್
ಬಿ. ಕೆ ಹರಿಪ್ರಸಾದ್

By

Published : Jun 7, 2022, 7:04 PM IST

ಮಂಗಳೂರು: ಚಡ್ಡಿ, ಕರಿಟೋಪಿ ಮತ್ತು ದೊಣ್ಣೆ ಹಿಡಿದುಕೊಂಡು ದೇಶ ಕಾಪಾಡುತ್ತೇವೆ ಎಂದು ಹೇಳುವ ಆರ್​ಎಸ್​ಎಸ್​ ದೇಶದ ಯೋಧರಿಗೆ ಅವಮಾನ ಮಾಡುತ್ತಿದ್ದಾರೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಬಿ. ಕೆ ಹರಿಪ್ರಸಾದ್ ಹೇಳಿದರು.

ವಿಧಾನಪರಿಷತ್ ವಿಪಕ್ಷ ನಾಯಕ ಬಿ. ಕೆ ಹರಿಪ್ರಸಾದ್ ಅವರು ಮಾತನಾಡಿದರು

ಮಂಗಳೂರಿನಲ್ಲಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಭಿನಂದನಾ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಆರ್​ಎಸ್​ಎಸ್​ ನವರು ದೇಶ ರಕ್ಷಿಸುತ್ತೇವೆ ಎನ್ನುತ್ತ ರಾಷ್ಟ್ರದಲ್ಲಿರುವ 50 ಲಕ್ಷ ಮಂದಿ ಸೈನಿಕರು, ಪೊಲೀಸರು, ಪ್ಯಾರಾ ಮಿಲಿಟರಿ ಯೋಧರಿಗೆ ಅವಮಾನ ಮಾಡುತ್ತಿದ್ದಾರೆ ಎಂದು ಹೇಳಿದರು.

ಈ ದೇಶವನ್ನು ರಕ್ಷಣೆ ಮಾಡಲು ಯೋಧರಿದ್ದಾರೆ. ಇವರು ಯಾವತ್ತಿಗೂ ರಾಷ್ಟ್ರ ರಕ್ಷಣೆಗೆ ಮುಂದೆ ನಿಂತಿರಲಿಲ್ಲ. ಕಾಕಿಚಡ್ಡಿ, ಕರಿಟೋಪಿ ಕಾಣಸಿಗುವುದು ಜರ್ಮನಿಯ ಹಿಟ್ಲರ್ ಆರ್ಮಿಯಲ್ಲಿ. ಇದೀಗ ಆರ್​ಎಸ್​ಎಸ್​ ನವರು ಅದನ್ನು ತೊಟ್ಟು ಹಿಂದೂ ಧರ್ಮವನ್ನು ರಕ್ಷಣೆ ಮಾಡುತ್ತೇವೆ ಎಂದು ಹೇಳುತ್ತಿರುವುದು ಜನರ ಕಣ್ಣಿಗೆ ಮಣ್ಣೆರಚುವ ಕೆಲಸವಾಗಿದೆ.

ಅವರ ಅಸ್ಮಿತೆಯನ್ನೇ ರಕ್ಷಿಸಲು ಅವರಿಗೆ ಆಗಿಲ್ಲ. ಅದರ ಮೇಲೆ ರಾಷ್ಟ್ರ ಕಾಪಾಡಲು ಇವರಿಗೆ ಸಾಧ್ಯವಿದೆಯೇ?. ಕಾಕಿ ಚಡ್ಡಿ ಎಂದರೆ ತ್ಯಾಗ-ಬಲಿದಾನಗಳ ಸಂಕೇತ ಎಂದು ಹೇಳುತ್ತಿದ್ದವರು ಈಗ ಪ್ಯಾಂಟ್​ಗೆ ಹೇಗೆ ಬದಲಾದರು. ಶೇ 40ರಷ್ಟು ಕಮಿಷನ್ ಪಡೆದ ಬಳಿಕ ಪ್ಯಾಂಟ್, 10 ಲಕ್ಷ ರೂ. ಸೂಟ್ ಎಲ್ಲವೂ ಬರುತ್ತದೆ ಎಂದರು.

ಓದಿ:ಬೆಂಗಳೂರಿನಲ್ಲಿ ಕಾಶ್ಮೀರ ಮೂಲದ ಶಂಕಿತ ಉಗ್ರನ ಬಂಧನ: ಗೃಹ ಸಚಿವ ಆರಗ ಜ್ಞಾನೇಂದ್ರ

For All Latest Updates

ABOUT THE AUTHOR

...view details