ಕರ್ನಾಟಕ

karnataka

ETV Bharat / state

ಆಸ್ಕರ್ ಫರ್ನಾಂಡೀಸ್ ಗುಣಮುಖರಾಗಲೆಂದು ವಿಶೇಷ ಪೂಜೆ ಸಲ್ಲಿಸಿದ ಜನಾರ್ದನ ಪೂಜಾರಿ - Former Union Minister B. Janardhana Poojary latest news

ಅನಾರೋಗ್ಯಪೀಡಿತರಾದ ಮಾಜಿ ಕೇಂದ್ರ ಸಚಿವ ಹಾಗೂ ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಅವರು ಶೀಘ್ರ ಗುಣಮುಖರಾಗಲೆಂದು  ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿಯವರು ದೇವಸ್ಥಾನ, ಚರ್ಚ್ ಹಾಗೂ ಮಸೀದಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

B. Janardhana poojari visits temple
ಆಸ್ಕರ್ ಫರ್ನಾಂಡೀಸ್ ಗುಣಮುಖರಾಗಲೆಂದು ವಿಶೇಷ ಪೂಜೆ ಸಲ್ಲಿಸಿದ ಜನಾರ್ಧನ ಪೂಜಾರಿ

By

Published : Jan 11, 2020, 5:11 PM IST

Updated : Jan 11, 2020, 11:52 PM IST

ಮಂಗಳೂರು: ಅನಾರೋಗ್ಯಪೀಡಿತರಾದ ಮಾಜಿ ಕೇಂದ್ರ ಸಚಿವ ಹಾಗೂ ರಾಜ್ಯ ಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಅವರು ಶೀಘ್ರ ಗುಣಮುಖರಾಗಲೆಂದು ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ ದೇವಸ್ಥಾನ, ಚರ್ಚ್ ಹಾಗೂ ಮಸೀದಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ

ನಗರದ ಕುದ್ರೋಳಿಯ ಗೋಕರ್ಣನಾಥ ದೇವಾಲಯ, ರೊಸಾರಿಯೋ ಚರ್ಚ್ ಹಾಗೂ ಉಳ್ಳಾಲದ ಸಯ್ಯದ್ ಮದನಿ ದರ್ಗಾದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ನನ್ನ ಪ್ರೀತಿಯ ತಮ್ಮ ಆಸ್ಕರ್ ಫರ್ನಾಂಡೀಸ್ ಅವರ ಆರೋಗ್ಯ ಸ್ಥಿತಿ ಅಷ್ಟೊಂದು ಸರಿಯಿಲ್ಲ. ಅವರು ಶೀಘ್ರ ಗುಣಮುಖರಾಗಲು ದೇವಸ್ಥಾನ, ಚರ್ಚ್ ಹಾಗೂ ಮಸೀದಿಗಳಲ್ಲಿ ಪೂಜೆ ನೆರವೇರಿಸಿದ್ದೇನೆ. ಅವರಿಗೆ ಪರಮಾತ್ಮ ಶಕ್ತಿಯನ್ನು ಕೊಡಬೇಕೆಂದು ಪ್ರಾರ್ಥನೆ ಮಾಡಿದ್ದೇನೆ. ಅವರಿಗೆ ಏನೂ ಆಗಲ್ಲ, ಅವರು ಒಳ್ಳೆಯ ಮನುಷ್ಯ, ದೇವತಾ ಮನುಷ್ಯ. ಈ ಜಗತ್ತಿನಲ್ಲಿ ಅಂತವರು ಸಿಗೋದೇ ಕಷ್ಟ. ಒಬ್ಬರಿಗೂ ಕೆಡುಕನ್ನು ಅವರು ಬಯಸಿಲ್ಲ. ಎಲ್ಲರನ್ನೂ ಪ್ರೀತಿಯಿಂದ ಅಪ್ಪಿಕೊಂಡವರು. ಈಗ ಅವರಿಗೆ ದೇವರು ಶಕ್ತಿ ಕೊಡುತ್ತಾನೆ. ಇಲ್ಲದಿದ್ದರೆ, ಈ ಜಗತ್ತಿನಲ್ಲಿ ದೇವರೆ ಇಲ್ಲ ಎಂದು ಭಾವುಕರಾದರು.

Last Updated : Jan 11, 2020, 11:52 PM IST

ABOUT THE AUTHOR

...view details