ಉಳ್ಳಾಲ(ಮಂಗಳೂರು):ಆಯುಷ್ಮಾನ್ ಕಾರ್ಡ್ ಆರೋಗ್ಯ ಸೌಲಭ್ಯಗಳನ್ನು ಪಡೆಯಲು ಉಪಯುಕ್ತವಾಗಿದ್ದು, ನಾಗರಿಕರಿಗೆ ಸಹಾಯಹಸ್ತವಾಗಿ ಈ ಯೋಜನೆ ತಂದಿರುವ ಕಾರ್ಯ ಶ್ಲಾಘನೀಯ ಎಂದು ನಗರಸಭೆ ಪೌರಾಯುಕ್ತ ರಾಯಪ್ಪ ಹೇಳಿದರು.
ಆಯುಷ್ಮಾನ್ ಕಾರ್ಡ್ ನೋಂದಣಿ, ವಿತರಣೆ - Kallapu Development Group
ಉಳ್ಳಾಲದ ಕಲ್ಲಾಪು ಡೆವಲಪ್ಮೆಂಟ್ ಗ್ರೂಪ್ ವತಿಯಿಂದ ಕಲ್ಲಾಪು ನಗರಸಭೆ ಸದಸ್ಯರ ಮನೆ ಆವರಣದಲ್ಲಿ ಆಯುಷ್ಮಾನ್ ಕಾರ್ಡ್ ನೋಂದಣಿ, ವಿತರಣೆ ಕಾರ್ಯಕ್ರಮಕ್ಕೆ ನಗರಸಭೆ ಪೌರಾಯುಕ್ತ ರಾಯಪ್ಪ ಚಾಲನೆ ನೀಡಿದರು.
![ಆಯುಷ್ಮಾನ್ ಕಾರ್ಡ್ ನೋಂದಣಿ, ವಿತರಣೆ Ayushman Card Registration and Distribution by Kallapu Development Group](https://etvbharatimages.akamaized.net/etvbharat/prod-images/768-512-8511955-16-8511955-1598064528848.jpg)
ಕಲ್ಲಾಪು ಡೆವಲಪ್ಮೆಂಟ್ ಗ್ರೂಪ್ ವತಿಯಿಂದ ಆಯುಷ್ಮಾನ್ ಕಾರ್ಡು ನೋಂದಣಿ, ವಿತರಣೆ
ಕಲ್ಲಾಪು ಡೆವಲಪ್ಮೆಂಟ್ ಗ್ರೂಪ್ ವತಿಯಿಂದ ಉಚಿತ ಆಯುಷ್ಮಾನ್ ಕಾರ್ಡ್ ನೋಂದಣಿ ಮತ್ತು ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕಾರ್ಡ್ ಪಡೆದುಕೊಂಡವರು ಇದರ ಉಪಯೋಗವನ್ನು ಪಡೆಯುವುದರೊಂದಿಗೆ ಇತರರಿಗೂ ತಿಳಿಸುವ ಕಾರ್ಯ ಮಾಡಬೇಕು ಎಂದರು.