ಕರ್ನಾಟಕ

karnataka

ETV Bharat / state

ನೇತ್ರಾವತಿ ಸೇತುವೆಯಲ್ಲಿ ಕಸ ಬಿಸಾಡುವವರ ವಿರುದ್ಧ ಜಾಗೃತಿ ಜಾಥಾ - ನೇತ್ರಾವತಿ ಸೇತುವೆಯಲ್ಲಿ ಕಸ ಬಿಸಾಡುವವರ ವಿರುದ್ಧ ಜಾಥಾ

ನೇತ್ರಾವತಿ ಸೇತುವೆಯಲ್ಲಿ ಕಸ ಬಿಸಾಡುವವರ ವಿರುದ್ಧ ವೃಕ್ಷ ಎನ್​ಜಿಒ ಜಾಗೃತಿ ಜಾಥಾ ನಡೆಸಿತು. ಇಂದು ನಸುಕಿನಿಂದ ಕಾರ್ಯಕ್ರಮ ನಡೆಸಿದ್ದು, ಸುಮಾರು 100 ಜನ ಕಾರ್ಯಕರ್ತರು ಭಾಗಿಯಾಗಿದ್ದರು.

Jatha against the garbage dumpers at Netravati Bridge
ನೇತ್ರಾವತಿ ಸೇತುವೆಯಲ್ಲಿ ಕಸ ಬಿಸಾಡುವವರ ವಿರುದ್ಧ ಜಾಥಾ

By

Published : Jan 19, 2021, 12:11 PM IST

Updated : Jan 19, 2021, 12:19 PM IST

ಉಳ್ಳಾಲ: ನೇತ್ರಾವತಿ ಸೇತುವೆಯಲ್ಲಿ ಕಸ ಬಿಸಾಡುವವರ ವಿರುದ್ಧ ವೃಕ್ಷ ಎನ್​ಜಿಒನ ಬಾಸ್ಕಿಯಾರ್ಬ್ಸ್​ ಯುವ ತಂಡದ ವತಿಯಿಂದ ಜಾಗೃತಿ ಜಾಥಾ ಎರಡನೇ ದಿನ ನಡೆಯಿತು. ಸುಮಾರು 100 ಜನ ಕಾರ್ಯಕರ್ತರು ನೇತ್ರಾವತಿ ಸೇತುವೆ ಉದ್ದಕ್ಕೂ ಸಾಲಾಗಿ ನಿಂತು ಮೊಬೈಲ್ ಟಾರ್ಚ್​ ಹಿಡಿದು ಕಸ ಬಿಸಾಡದಂತೆ ಜಾಗೃತಿ ಮೂಡಿಸಿದರು.

ಪರಿಸರ ಮಾಲಿನ್ಯದ ವಿರುದ್ಧ ಸಂಸ್ಥೆ ಪರಿಣಾಮಕಾರಿಯಾಗಿ ಜಾಗೃತಿ ಜಾಥಾಗಳನ್ನು ನಡೆಸುತ್ತಾ ಬಂದಿದೆ. ಇತ್ತೀಚೆಗೆ ಬೆಂಗ್ರೆ ಸಮುದ್ರ ತೀರದಲ್ಲಿ ತ್ಯಾಜ್ಯದ ರಾಶಿ ವಿರುದ್ಧ ಜಾಗೃತಿಗೆ ಮುಂದಾದಾಗ, ಅಲ್ಲಿ ಶೇಖರಣೆಯಾಗುವ ತ್ಯಾಜ್ಯವೆಲ್ಲ ನೇತ್ರಾವತಿ ಸೇತುವೆಯಿಂದ ಎಸೆದದ್ದಾಗಿದೆ ಎಂದು ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ನೇತ್ರಾವತಿ ಸೇತುವೆಯಲ್ಲೇ ಜಾಥಾ ಕೈಗೊಳ್ಳಲು ತೀರ್ಮಾನಿಸಿ, ಇಂದು ಎರಡನೇ ದಿನ ನಸುಕಿನಿಂದ ಕಾರ್ಯಕ್ರಮ ನಡೆಸಿದರು.

ನೇತ್ರಾವತಿ ಸೇತುವೆಯಲ್ಲಿ ಕಸ

ಇದನ್ನು ಓದಿ:ಎಟಿಎಂ ಕಳ್ಳತನಕ್ಕೆ ವಿಫಲ ಯತ್ನ.. ಖದೀಮರ ಚಲನವಲನ ಸಿಸಿಟಿವಿಯಲ್ಲಿ ಸೆರೆ

ಜನ ಶಿಕ್ಷಣ ಟ್ರಸ್ಟ್ ನಿರ್ದೇಶಕ ಶೀನ ಶೆಟ್ಟಿ, ಬಿಗ್ ಬ್ಯಾಂಗ್ ಸಕ್ರಿಯ ಸದಸ್ಯ ಮಹಮ್ಮದ್ ಫೌಝಾನ್ ಶೇಖ್, ಹಸಿರುದಳ ನಾಗರಾಜ್ ರಾಘವ್ ಅಂಚನ್, ಎಪಿಡಿ ಫೌಂಡೇಶನ್ ನ ವಾಣಿಶ್ರೀ ಬಿ.ಆರ್ , ಮನಪಾ ಸದಸ್ಯೆ ವೀಣಾ ಉಪಸ್ಥಿತರಿದ್ದರು. ‌

Last Updated : Jan 19, 2021, 12:19 PM IST

For All Latest Updates

ABOUT THE AUTHOR

...view details