ಕರ್ನಾಟಕ

karnataka

ETV Bharat / state

ವಿಜಯೋತ್ಸವ ಮೆರವಣಿಗೆ ವೇಳೆ ಆಟೋ ಚಾಲಕನ ಮೇಲೆ ಹಲ್ಲೆ: ಪ್ರಕರಣ ದಾಖಲು - auto driver assaulted in bantwal news

ಗ್ರಾಮ ಪಂಚಾಯಿತಿ ಚುನಾವಣಾ ಫಲಿತಾಂಶದ ದಿನದಂದು ರಾಜಕೀಯ ಪಕ್ಷವೊಂದರ ಬೆಂಬಲಿಗರು ವಿಜಯೋತ್ಸವ ಮೆರವಣಿಗೆ ವೇಳೆ ಅಡ್ಡ ಬಂದ ಎಂದು ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

auto driver assaulted during procession
ಪ್ರಕರಣ ದಾಖಲು

By

Published : Jan 2, 2021, 5:07 PM IST

ಬಂಟ್ವಾಳ: ಪಕ್ಷವೊಂದರ ಬೆಂಬಲಿಗರ ವಿಜಯೋತ್ಸವ ಮೆರವಣಿಗೆ ವೇಳೆ ಅಡ್ಡ ಬಂದ ಎಂದು ಆಟೋ ಚಾಲಕನ ಮೇಲೆ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು, ಈ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಲೂಕಿನ ಗಡಿ ಭಾಗವಾದ ಕನ್ಯಾನ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪೊಯ್ಯಗದ್ದೆ ನಿವಾಸಿ ಕರೀಂ ಅವರ ಪುತ್ರ ಸಾದಿಕ್ ಹಲ್ಲೆಗೊಳಗಾಗಿದ್ದು, ತುಂಬೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆ ಸಂಬಂಧ ಉಮ್ಮರ್, ಭಾತಿಷ್, ಆರಿಸ್ ಕುಕ್ಕಾಜೆ, ಮಜೀದ್, ಕೆಪಿ ಅಬ್ದುಲ್ ರೆಹಮಾನ್, ಸಾಬಿತ್, ಇಸ್ಮಾಲಿ ಕುಕ್ಕಾಜೆ, ಆಸೀಫ್, ವಾಜಿಪಾಯಿ ನಾಸೀರ್ ವಿರುದ್ಧ ಪ್ರಕರಣ ದಾಖಲಾಗಿದೆ.

ಕನ್ಯಾನ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಜಯ ಗಳಿಸಿದ ಅಭ್ಯರ್ಥಿಗಳು ತಮ್ಮ ಬೆಂಬಲಿಗರ ಜೊತೆ ಮೆರವಣಿಗೆ ತೆರಳುತ್ತಿದ್ದಾಗ ವಿರುದ್ಧ ದಿಕ್ಕಿನಿಂದ ಆಟೋದಲ್ಲಿ ಬಂದ ಸಾದಿಕ್​ನನ್ನು ತಡೆದು ದೊಣ್ಣೆಯಿಂದ ಹಲ್ಲೆ ನಡೆಸಿದ್ದಾಗಿ ದೂರಿನಲ್ಲಿ ಆರೋಪಿಸಲಾಗಿದೆ.

ಇದನ್ನೂ ಓದಿ:ಅಡುಗೆ ಸಹಾಯಕರ 3 ತಿಂಗಳ ಗೌರವ ಸಂಭಾವನೆ ಬಿಡುಗಡೆ ಮಾಡಿದ ಸರ್ಕಾರ

ABOUT THE AUTHOR

...view details