ಕರ್ನಾಟಕ

karnataka

ETV Bharat / state

ಕೊನೆಗೂ ತೋಡಿನಲ್ಲಿ ಬಿದ್ದು ಮೃತಪಟ್ಟ ವ್ಯಕ್ತಿಯ ಅಂತ್ಯಸಂಸ್ಕಾರ ನಡೆಸಲು ಮುಂದಾದ ಅಧಿಕಾರಿಗಳು

ಮೃತ ವ್ಯಕ್ತಿ ಶಾಶ್ವತ ದೈಹಿಕ ನ್ಯೂನತೆಗೆ ಒಳಗಾಗಿದ್ದು, ಪಂಜ ಸಮೀಪದ ನೆಲ್ಲಿಕಟ್ಟೆಯಿಂದ ಜಳಕದಹೊಳೆಗೆ ಹೋಗುವ ದಾರಿಯ ಗುಂಡಡ್ಕ ಎಂಬಲ್ಲಿ ಆಯಾ ತಪ್ಪಿ ತೋಡಿಗೆ ಬಿದ್ದು ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ.

Authorities provided to hold the funeral
21 ಗಂಟೆಗಳ ಬಳಿಕ ತೋಡಿನಲ್ಲಿ ಬಿದ್ದು ಮೃತಪಟ್ಟ ವ್ಯಕ್ತಿಯ ಅಂತ್ಯಸಂಸ್ಕಾರ ನಡೆಸಲು ಮುಂದಾದ ಅಧಿಕಾರಿಗಳು

By

Published : Nov 13, 2020, 5:57 PM IST

ಸುಳ್ಯ:ಸುಮಾರು 21 ಗಂಟೆಗಳ ಕಾಲ ತೋಡಿನಲ್ಲಿ ಬಿದ್ದಿದ್ದ ವ್ಯಕ್ತಿಯೊಬ್ಬರ ಮೃತದೇಹವನ್ನು ಪಂಜ ಗ್ರಾ.ಪಂ ಸಿಬಂದಿ, ಸುಬ್ರಹ್ಮಣ್ಯ ಠಾಣೆಯ ಪೊಲೀಸರು ಹಾಗೂ ಸ್ಥಳೀಯರ ನೆರವಿನೊಂದಿಗೆ ಮೇಲೆಕ್ಕೆತ್ತುವಲ್ಲಿ ಸಫಲರಾಗಿದ್ದಾರೆ.

ಪಂಚಾಯತ್ ಹಾಗೂ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ 18 ಗಂಟೆಯ ಬಳಿಕವೂ ಶವ ಮೇಲಕ್ಕೆತ್ತಿ, ಅಂತ್ಯ ಸಂಸ್ಕಾರ ಮಾಡದೇ ಅಸಡ್ಡೆ ತೋರಿಸಿದ ಇಲಾಖೆಯ ಅಧಿಕಾರಿಗಳ ಅಮಾನವೀಯತೆಯ ಬಗ್ಗೆ ಮಾಧ್ಯಮಗಳು ಗಮನ ಸೆಳೆದ ಬಳಿಕ ಎಚ್ಚೆತ್ತುಕೊಂಡ ಅಧಿಕಾರಿಗಳು ಶವಕ್ಕೆ ಮುಕ್ತಿ ಕಾಣಿಸಲು ಮುಂದಾಗಿದ್ದಾರೆ.

ಪಲ್ಲೋಡಿಯ ಚೋಮ ಅಜಲರವರ ಪುತ್ರ ರಾಜು ಅಜಲ ಎಂಬವರು ತೋಡಿಗೆ ಬಿದ್ದು ಮೃತಪಟ್ಟವರು. ಕೆಲ ವರ್ಷಗಳ ಹಿಂದೆ ಅನಾರೋಗ್ಯ ಪೀಡಿತರಾಗಿ ಆಸ್ಪತ್ರೆ ಸೇರಿದ್ದ ರಾಜು, ಬಳಿಕ ಶಾಶ್ವತ ದೈಹಿಕ ನ್ಯೂನ್ಯತೆಗೆ ಒಳಗಾಗಿದ್ದರು. ಬಳಿಕ ಒಂದು ಕೋಲು ಹಿಡಿದುಕೊಂಡು ಓಡಾಟ ನಡೆಸುತಿದ್ದ ಇವರು ಪಂಜ ಸಮೀಪದ ನೆಲ್ಲಿಕಟ್ಟೆಯಿಂದ ಜಳಕದಹೊಳೆಗೆ ಹೋಗುವ ದಾರಿಯಲ್ಲಿ ಗುಂಡಡ್ಕ ಎಂಬಲ್ಲಿ ಆಯಾ ತಪ್ಪಿ ತೋಡಿಗೆ ಬಿದ್ದಿದ್ದಾರೆ ಎನ್ನಲಾಗುತ್ತಿದೆ.

ತೋಟಕ್ಕೆ ತೆರಳುತಿದ್ದ ಸ್ಥಳೀಯರೊಬ್ಬರು ನೀರಿರುವ ಆಳವಾದ ಗುಂಡಿಯಲ್ಲಿ ಶವ ಇರುವುದನ್ನು ಗಮನಿಸಿ ನಿನ್ನೆ (ಗುರುವಾರ ) ಸಂಜೆ ಆರು ಗಂಟೆಗಳ ಸುಮಾರಿಗೆ ಪಂಜ ಗ್ರಾ .ಪಂ ಪಿಡಿಒ ಹಾಗೂ ಸುಬ್ರಹ್ಮಣ್ಯ ಠಾಣೆಗೆ ಮಾಹಿತಿ ನೀಡಿದ್ದಾರೆ. ನಿನ್ನೆ ಪರಿಶೀಲನೆಗೆ ಬಂದ ಸುಬ್ರಹ್ಮಣ್ಯ ಪೊಲೀಸರು ನಾಳೆ ಬರುವುದಾಗಿ ತಿಳಿಸಿ ಸ್ಥಳದಿಂದ ತೆರಳಿದ್ದರು. ಇಂದು ಬೆಳಗ್ಗೆ ಪಂಚಾಯತ್ ಪಿಡಿಒ ಪುರುಷೋತ್ತಮ್ ಹಾಗೂ ಸಿಬ್ಬಂದಿ ಬಂದು ನೋಡಿಕೊಂಡು ಹೋಗಿದ್ದರು. ಇಂದು ಮಧ್ಯಾಹ್ನ ವಾದರೂ ಶವ ವಿಲೇವಾರಿಗೆ ಮಾತ್ರ ಅಧಿಕಾರಿಗಳು ಮುಂದಾಗದ ಹಿನ್ನೆಲೆಯಲ್ಲಿ ಸ್ಥಳೀಯರು ಮಾಧ್ಯಮಗಳ ಮೊರೆ ಹೋಗಿದ್ದರು.

ಬಳಿಕ ಸುಬ್ರಹ್ಮಣ್ಯ ಠಾಣಾ ಎಸ್​ಐ ಓಮನ ಹಾಗೂ ಸಿಬಂದಿ, ಪಂಜ ಗ್ರಾಮ ಪಂಚಾಯತ್​​ನ ಸಿಬಂದಿ ಸ್ಥಳಕ್ಕೆ ಆಗಮಿಸಿ ಸ್ಥಳೀಯರ ನೆರವಿನಿಂದ ಶವವನ್ನು ತೋಡಿನಿಂದ ಮೇಲಕ್ಕೆತ್ತಿದ್ದರು. ಗ್ರಾ.ಪಂ ಸಿಬಂದಿ ಪ್ರದೀಪ್ ಮಾಜಿ ಗ್ರಾ.ಪಂ ಸದಸ್ಯ ಲಕ್ಷ್ಮಣ ಉಪಸ್ಥಿತರಿದ್ದರು. ಮೃತ ರಾಜು ಅವರ ಸಹೋದರ ಈ ಹಿಂದೆಯೇ ಮೃತಪಟ್ಟಿದ್ದಾರೆ. ಹಾಗಾಗಿ ಇವರ ಅಂತ್ಯ ಸಂಸ್ಕಾರ ನಡೆಸಲು ಗ್ರಾ.ಪಂಚಾಯಿತಿಗೆ ಕುಟುಂಬಸ್ಥರು ಅನುಮತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

For All Latest Updates

ABOUT THE AUTHOR

...view details