ಕರ್ನಾಟಕ

karnataka

ETV Bharat / state

ಸ್ವಪಕ್ಷದಲ್ಲೇ ನಳಿನ್​ ಕುಮಾರ್​ ಟಿಕೆಟ್​ಗೆ ಅಪಸ್ವರ... ವೈರಲ್​ ಆಯ್ತು ಕಾರ್ಯಕರ್ತರ ಆಡಿಯೊ - ಸಂಸದ ನಳಿನ್ ಕುಮಾರ್

ಸಂಸದ ನಳಿನ್ ಕುಮಾರ್ ಕಟೀಲುರವರ ತಳಮಟ್ಟದ ಬಿಜೆಪಿ ಕಾರ್ಯಕರ್ತರನ್ನು ಕಡೆಗಣಿಸುತ್ತಾರೆ, ಅವರಿಗೆ ಲೋಕಸಭೆ ಚುನಾವಣೆಯ ಟಿಕೆಟ್​ ನೀಡಬಾರದು ಎಂಬ ಆಡಿಯೋ ವೈರಲ್​ ಆಗಿದೆ.

ಹಾಲಿ ಸಂಸದ ನಳಿನ್ ಕುಮಾರ್

By

Published : Mar 17, 2019, 7:17 PM IST

ಮಂಗಳೂರು:ದಕ್ಷಿಣ ಕನ್ನಡ ಸಂಸದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಅವರಿಗೆ ಈ ಲೋಕ‌ಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಬಾರದೆಂಬ ಇಬ್ಬರು ಬಿಜೆಪಿ ಕಾರ್ಯಕರ್ತರ ಆಕ್ರೋಶಭರಿತ ತುಳು ಭಾಷೆಯ ಫೋನ್ ಸಂಭಾಷಣೆ ವೈರಲ್ ಆಗಿದೆ.

ಶಕ್ತಿಕೇಂದ್ರದ ಸಭೆಗೆ ಆಹ್ವಾನವಿತ್ತ ಸಂದರ್ಭ ಕಾರ್ಯಕರ್ತರೊಬ್ಬರು ನಳಿನ್ ಕುಮಾರ್ ವಿರುದ್ಧ ಆಕ್ರೋಶಭರಿತರಾಗಿ ಮಾತನಾಡಿದ್ದು, ಅದಕ್ಕೆ ಪೂರಕವಾಗಿ ಕರೆಮಾಡಿರುವ ಕಾರ್ಯಕರ್ತರೂ ಮಾತನಾಡಿದ್ದಾರೆ.

ನಳಿನ್ ಕುಮಾರ್ ಕಟೀಲು ತಳಮಟ್ಟದ ಬಿಜೆಪಿ ಕಾರ್ಯಕರ್ತರನ್ನು ಕಡೆಗಣಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿ, ನಳಿನ್ ಕುಮಾರ್​ಗೆ ಈ ಸಲ ಲೋಕಸಭಾ ಚುನಾವಣಾ ಅಭ್ಯರ್ಥಿಯಾಗಿ ಟಿಕೆಟ್ ಕೊಟ್ಟರೆ ಜಿಲ್ಲಾ ಬಿಜೆಪಿ ಕಚೇರಿ ಮುಂಭಾಗ ಅಥವಾ ಸಂಘ ನಿಕೇತನ ಮುಂದೆ ವಿಷ ಕುಡಿಯುವುದಾಗಿ ಹೇಳಿಕೊಂಡಿದ್ದಾರೆ.

ಹಾಲಿ ಸಂಸದ ನಳಿನ್ ಕುಮಾರ್ ಕಟೀಲು ವಿರುದ್ಧ ಕಾರ್ಯಕರ್ತರು ಅಸಮಾಧಾನಗೊಂಡಿರುವ ಹಿನ್ನಲೆ ಅವರ ಪರ ಕೆಲಸ ಮಾಡಲು ಕೂಡ ಕಾರ್ಯಕರ್ತರು ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.

ABOUT THE AUTHOR

...view details