ಕಡಬ(ದಕ್ಷಿಣ ಕನ್ನಡ):ಬೆಡ್ ಸೀಟ್,ಕಂಬಳಿ ಮಾರುವ ಸೋಗಿನಲ್ಲಿ ಬಂದ ಇಬ್ಬರು ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನ ನಡೆಸಿದ ಘಟನೆ ಕಡಬದ ಕಾಣಿಯೂರು ಸಮೀಪದ ದೋಳ್ಪಾಡಿ ಎಂಬಲ್ಲಿ ನಡೆದಿದೆ.
ಪೊಳಲಿಯ ಅಡ್ಡೂರು ನಿವಾಸಿಗಳಾದ ರಫೀಕ್ ಹಾಗೂ ರಮಿಯಾಸುದ್ದಿನ್ ಎಂಬುವರ ವಿರುದ್ಧ ಅತ್ಯಾಚಾರಕ್ಕೆ ಯತ್ನಿಸಿದ ಬಗ್ಗೆ ಮಹಿಳೆ ದೂರು ನೀಡಿದ್ದು, ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮಸ್ಥರ ಮಾಹಿತಿ ಪ್ರಕಾರ, ಮನೆ ಮನೆಗೆ ಬಟ್ಟೆ ಮಾರುವುದಾಗಿ ಹೇಳಿಕೊಂಡು ಆರೋಪಿಗಳು ಕಾಣಿಯೂರಿಗೆ ಬಂದಿದ್ದಾರೆ. ಅಲ್ಲಿಂದ ಹಲವು ಮನೆಗಳಿಗೆ ಅವರು ತೆರಳಿದ್ದು, ಬಳಿಕ ದೋಳ್ಪಾಡಿ ಗ್ರಾಮಕ್ಕೂ ಬಂದಿದ್ದರು. ಅಲ್ಲಿ ಅವರು ಬಟ್ಟೆ ಮಾರುವ ನೆಪದಲ್ಲಿ ಮನೆಯೊಂದಕ್ಕೆ ತೆರಳಿದ್ದು, ಒಬ್ಬಂಟಿ ಮಹಿಳೆ ಇರುವುದನ್ನು ಗಮನಿಸಿದ್ದಾರೆ. ಅದಾದ ಬಳಿಕ ಓರ್ವ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಮಹಿಳೆ ಜೋರಾಗಿ ಕಿರುಚಾಡಿದ್ದು, ಕೂಡಲೇ ಆರೋಪಿಗಳು ತಾವು ಬಂದಿದ್ದ ಕಾರಿನಲ್ಲಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ಚಿಕ್ಕಮಗಳೂರು: ಅರಣ್ಯ ಇಲಾಖೆ ಶೌಚಾಲಯದಲ್ಲಿ ವ್ಯಕ್ತಿಯ ಶವ, ಲಾಕಪ್ ಡೆತ್ ಆರೋಪ
ಪ್ರತಿದೂರು:ಘಟನೆ ಬೆನ್ನಲ್ಲೇಅತ್ಯಾಚಾರ ಆರೋಪ ಹೊತ್ತ ಇಬ್ಬರೂ ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಾನು ರಫೀಕ್ ಜೊತೆ ಬೆಡ್ ಶೀಟ್ ಮಾರಾಟಕ್ಕೆಂದು ಕಡಬ ತಾಲೂಕಿನ ದೋಲ್ಪಾಡಿಗೆ ಗುರುವಾರ ತೆರಳಿದ್ದೆ. ಈ ವೇಳೆ ಅಲ್ಲಿನ ಮನೆಯೊಂದರ ಮಹಿಳೆಯ ಜೊತೆಗೆ ಸ್ವಲ್ಪ ತಕರಾರು ಉಂಟಾಗಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಬಳಿಕ ಹಿಂತಿರುಗಿ ಕಾಣಿಯೂರು ಕಡೆಗೆ ತೆರಳುತ್ತಿದ್ದ ವೇಳೆ ಬೆದ್ರಾಜೆ ಎಂಬಲ್ಲಿ ಗುಂಪೊಂದು ಪಿಕಪ್ ವಾಹನವನ್ನು ರಸ್ತೆಗೆ ಅಡ್ಡವಾಗಿಟ್ಟು, ಕಾರು ತಡೆದು ನಿಲ್ಲಿಸಿದೆ. ಬಳಿಕ ಕಾರಿನಿಂದ ನಮ್ಮನ್ನು ರಸ್ತೆಗೆ ಬೀಳಿಸಿ ಅವಾಚ್ಯ ಶಬ್ದಗಳಿಂದ ಬೈದು ದೊಣ್ಣೆ ಹಾಗೂ ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿ, ಕಾಲಿನಿಂದ ತುಳಿದು ರಸ್ತೆಯಲ್ಲಿ ಎಳೆದಾಡಿ ಕಾರಿಗೂ ಕೂಡ ಹಾನಿ ಮಾಡಿದ್ದಾರೆ ಎಂದು ಆರೋಪಿಸಿ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರತಿದೂರು ನೀಡಿದ್ದಾರೆ.
ಇದನ್ನೂ ಓದಿ: ಕಡಬ ಮಹಿಳೆ ಅತ್ಯಾಚಾರ ಯತ್ನ ಪ್ರಕರಣಕ್ಕೆ ಟ್ವಿಸ್ಟ್: ಪ್ರತಿದೂರು ದಾಖಲು, ವಿಡಿಯೋ ವೈರಲ್