ಕರ್ನಾಟಕ

karnataka

ETV Bharat / state

ಮಂಗಳೂರು: ಕಾರಿನಲ್ಲಿದ್ದ ವ್ಯಕ್ತಿ ಮೇಲೆ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆ - ಅಡ್ಯಾರ್ ಪದವು ಬಳಿ ವ್ಯಕ್ತಿ ಮೇಲೆ ಹಲ್ಲೆ

ಕಾರಿನಲ್ಲಿದ್ದ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಮಂಗಳೂರಿನ ಅಡ್ಯಾರ್ ಪದವು ಎಂಬಲ್ಲಿ ನಡೆದಿದೆ.

attack-on-person-in-mangaluru
ವ್ಯಕ್ತಿ ಮೇಲೆ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆ

By

Published : Dec 11, 2021, 2:20 AM IST

Updated : Dec 11, 2021, 5:44 AM IST

ಮಂಗಳೂರು:ನಗರದ ಅಡ್ಯಾರ್ ಪದವು ಎಂಬಲ್ಲಿ ವ್ಯಕ್ತಿ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ರಿಯಾಝ್ ಅಹ್ಮದ್(38) ಎಂಬಾತ ಘಟನೆಯಲ್ಲಿ ಗಾಯಗೊಂಡಿದ್ಧಾನೆ.

ರಿಯಾಝ್ ಅಹ್ಮದ್ ಅಡ್ಯಾರ್ ಪದವು ಎಂಬಲ್ಲಿ ಕಾರಿನಲ್ಲಿದ್ದ ವೇಳೆ 3-4 ಜನರಿದ್ದ ತಂಡವೊಂದು ಅಲ್ಲಿಗೆ ಬಂದಿದೆ. ಅಲ್ಲದೆ ಏಕಾಏಕಿ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದೆ. ತಕ್ಷಣ ಸ್ಥಳದಲ್ಲಿದ್ದವರು ರಿಯಾಝ್​ರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ಮಾತನಾಡಿ, ಯಾವ ರೀತಿ ಗಾಯವಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿದಿಲ್ಲ. ಈ ಬಗ್ಗೆ ವೈದ್ಯರು ಪರಿಶೀಲಿಸಿ ಹೇಳಬೇಕಿದೆ‌. ಯಾರು, ಯಾಕೆ ಹಲ್ಲೆ ನಡೆಸಿದ್ದಾರೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ‌ ಎಂದು ಹೇಳಿದರು.

ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ಪ್ರತಿಕ್ರಿಯೆ

ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ನಮ್ ಶಾಲೆ ಬಿಟ್ಟು ಹೋಗಬೇಡಿ ಸರ್​​.. ನೆಚ್ಚಿನ ಶಿಕ್ಷಕರ ವರ್ಗಾವಣೆಗೆ ಮಕ್ಕಳು, ಸಹೋದ್ಯೋಗಿಗಳ ಕಣ್ಣೀರು

Last Updated : Dec 11, 2021, 5:44 AM IST

ABOUT THE AUTHOR

...view details