ಉಪ್ಪಿನಂಗಡಿ:ವಾಟ್ಸಪ್ನಲ್ಲಿ ರಾಮ ಮಂದಿರ ನಿರ್ಮಾಣದ ಸ್ಟೇಟಸ್ ಹಾಕಿದ್ದಾನೆ ಎಂಬ ಕಾರಣಕ್ಕೆ ಅನ್ಯ ಧರ್ಮದ ಯುವಕರ ಗುಂಪೊಂದು ಮನೆಗೆ ತೆರಳಿ ಹಲ್ಲೆಗೆ ಯತ್ನಿಸಿದ ಘಟನೆ ಇಲ್ಲಿನ ಆದರ್ಶ ನಗರದಲ್ಲಿ ನಡೆದಿದೆ.
ಆದರ್ಶನಗರ ನಿವಾಸಿ ಮುಕುಂದ್ ಎಂಬಾತ ತನ್ನ ವಾಟ್ಸಪ್ ಸ್ಟೇಟಸ್ನಲ್ಲಿ ರಾಮ ಮಂದಿರ ನಿರ್ಮಾಣದ ಕುರಿತು ವಿಡಿಯೋ ತುಣುಕನ್ನು ಹಾಕಿದ್ದ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಅನ್ಯ ಧರ್ಮದ ಯುವಕರ ಗುಂಪು, ತಡರಾತ್ರಿ ಮುಕುಂದ್ ಮನೆಗೆ ತೆರಳಿ ಗೇಟ್ ಬಳಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.