ಕರ್ನಾಟಕ

karnataka

ETV Bharat / state

ಅಪ್ರಾಪ್ತೆ ಮೇಲೆ ಹಲ್ಲೆ, ಕಿರುಕುಳ ಯತ್ನ: ಮಾವ, ಅತ್ತೆ ವಿರುದ್ಧ ಎಸ್‌ಪಿಗೆ ದೂರು - assault on minor

ಆಸ್ತಿ ವಿಚಾರವಾಗಿ ಮಾವ, ಅತ್ತೆ ಹಾಗೂ ಮಾವನ ಮಗ ನನಗೆ ಕಿರುಕುಳ ನೀಡುತ್ತಿದ್ದಾರೆ. ಅಲ್ಲದೇ ನಾನು ನನ್ನ ಅಜ್ಜಿಯೊಂದಿಗೆ ಕಳೆದ 16 ವರ್ಷಗಳಿಂದ ಜೊತೆಗಿದ್ದೇನೆ. ನಮ್ಮಿಬ್ಬರಿಗೂ ಇವರಿಂದ ರಕ್ಷಣೆ ಕೊಡಿ ಮತ್ತು ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸ್ನೋವಿ ಎಂ. ಥೋಮಸ್ ಎಂಬುವವರು ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದಾರೆ.

Student complains to SP against father-in-law
ಮಾವ, ಅತ್ತೆ ವಿರುದ್ಧ ಎಸ್‌ಪಿಗೆ ದೂರು ನೀಡಿದ ವಿದ್ಯಾರ್ಥಿನಿ

By

Published : Jan 6, 2022, 8:15 PM IST

ಕಡಬ (ದಕ್ಷಿಣ ಕನ್ನಡ): ಆಸ್ತಿ ವಿಚಾರವಾಗಿ ವೃದ್ಧೆ ತಾಯಿ ಮತ್ತು ಆಕೆಯ ಮೊಮ್ಮಗಳಾದ ಸ್ನೋವಿ ಎಂ. ಥೋಮಸ್ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಘಟನೆಗೆ ಸಂಬಂಧಿಸಿದಂತೆ ಆಕೆ ನ್ಯಾಯ ದೊರಕಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದಾಳೆ.

ಈ ಘಟನೆ ಕಡಬದ ಕೋಡಿಂಬಾಳದ ಬಳ್ಳಿಕಜೆ ಎಂಬಲ್ಲಿ ನಡೆದಿದೆ. ತುಳುನಾಡು ರಕ್ಷಣಾ ವೇದಿಕೆಯ ಮೂಲಕ ದೂರು ನೀಡಿದ್ದು, ಸಂತ್ರಸ್ತ ಯುವತಿಯ ಮಾವ, ಅತ್ತೆ ಹಾಗೂ ಮಾವನ ಮಗನ ವಿರುದ್ಧ ಆರೋಪ ಮಾಡಲಾಗಿದೆ. ಅಲ್ಲದೆ ವೃದ್ಧೆ ತಾಯಿ ಮತ್ತು ಆಕೆಯ ಮೊಮ್ಮಗಳ ಮೇಲೆ ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ಹಲ್ಲೆ ನಡೆಸಲಾಗಿದೆ ಎಂದು ದೂರಲಾಗಿದೆ.

ಯುವತಿ ನೀಡಿದ ದೂರಿನ ಸಾರಾಂಶ:

ನನ್ನ ಅಜ್ಜಿಯವರಿಗೆ 2 ಎಕರೆ 70 ಸೆಂಟ್ಸ್ ಜಾಗ ಇದ್ದು, ಈ ಆಸ್ತಿಯನ್ನು ನನ್ನ ಮೂವರು ಮಾವಂದಿರಿಗೆ ಹಾಗೂ ತನಗೂ ಪಾಲು ಮಾಡಿರುತ್ತಾರೆ. ನನ್ನ ಪಾಲಿನ ಜಾಗ ಅಜ್ಜಿಯ ಹೆಸರಿನಲ್ಲಿ ಇರುತ್ತದೆ. ಜಮೀನಲ್ಲಿ ಮೊಮ್ಮಗಳಿಗೆ ಪಾಲು ಕೊಟ್ಟಿರುವುದಕ್ಕೆ ಮಾವ ಜಾನ್ಸನ್ ಹಾಗೂ ಅತ್ತೆ ಜೆನ್ಸಿಯವರು ತಕರಾರು ಮಾಡಿರುತ್ತಾರೆ. ಅಲ್ಲದೆ ನನ್ನ ಅಜ್ಜಿಯವರ ಕುತ್ತಿಗೆಯನ್ನು ಹಿಡಿದು ಕೈಯಿಂದ ಹಲ್ಲೆ ಮಾಡಿರುತ್ತಾರೆ.

ಕಳೆದ ದಿನಾಂಕ 02-01-2022 ರಂದು ಮಧ್ಯಾಹ್ನ ಕಡಬ ತಾಲೂಕು ಕೋಡಿಂಬಾಳ ಚರ್ಚಿನಿಂದ ಪ್ರಾರ್ಥನೆ ಮುಗಿಸಿ ನಾನು ಹೊರಗಡೆ ಬಂದಾಗ ನನ್ನ ಮಾವ ಜೋನ್ಸನ್, ಅತ್ತೆ ಜೆನ್ಸಿ ಹಾಗೂ ಅವರ ಮಗ ಸ್ಲೇವಿನ್ ನನ್ನನ್ನು ಅಡ್ಡಗಟ್ಟಿ ಮಾವ ಜೋನ್ಸನ್ ನನ್ನನ್ನು ಉದ್ದೇಶಿಸಿ ಅವಾಚ್ಯ ಪದ ಬಳಸಿದ್ದಲ್ಲದೆ ನಿನ್ನನ್ನು ಹಾಗೂ ನಿನ್ನ ಅಜ್ಜಿಯನ್ನು ಕೊಲ್ಲದೆ ಬಿಡುವುದಿಲ್ಲ ಎಂಬುದಾಗಿ ಬೈದು ನನಗೆ ಜೀವ ಬೆದರಿಕೆ ಹಾಕಿದ್ದಾರೆ. ಇವರುಗಳು ಊರಿನಲ್ಲೂ ನನ್ನ ಬಗ್ಗೆ ತೇಜೋವಧೆ ಮಾಡುತ್ತಿರುವುದರಿಂದ ನಾನು ಮಾನಸಿಕವಾಗಿ ಕುಗ್ಗಿರುತ್ತೇನೆ.

ಈ ಸಂಬಂಧ ಈಗಾಗಲೇ ನಾನು ಕಡಬ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ನನಗೆ ಮತ್ತಷ್ಟು ಬೇಸರ ತರಿಸಿದೆ. ಈ ಹಿನ್ನೆಲೆಯಲ್ಲಿ ನಾನು ತುಳುನಾಡ ರಕ್ಷಣಾ ವೇದಿಕೆಗೆ ದೂರು ನೀಡಿದ್ದು ಅವರ ಮೂಲಕ ನಾನು ತಮ್ಮಲ್ಲಿ ವಿನಂತಿಸುವುದೇನೆಂದರೆ ನನಗೆ ಹಾಗೂ ನನ್ನ ಅಜ್ಜಿಯವರಿಗೆ ನನ್ನ ಮಾವ ಅತ್ತೆ ಹಾಗೂ ಅವರ ಮಗ ತೊಂದರೆಯನ್ನು ನೀಡುವ ಸಾಧ್ಯತೆ ಇರುವುದರಿಂದ ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಕರ್ತವ್ಯದಲ್ಲಿ ಅಶಿಸ್ತು: ಮಂಗಳೂರು ಮಹಿಳಾ ಠಾಣೆಯ ಎಲ್ಲಾ 32 ಪೊಲೀಸ್​ ಸಿಬ್ಬಂದಿ ಎತ್ತಂಗಡಿ

ಪ್ರಕರಣದ ಸುತ್ತ:

ಅಜ್ಜಿ ಮರಿಯಮ್ಮರೊಂದಿಗೆ ಕಳೆದ 16 ವರ್ಷಗಳಿಂದ ಸ್ನೋವಿ ಎಂ. ಥೋಮಸ್ ವಾಸಿಸುತ್ತಿದ್ದು, ಕಡಬ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾಳೆ. ಸ್ನೋವಿ ಎಂ. ಥೋಮಸ್ ಒಂದು ವರ್ಷದ ಮಗು ಇರುವಾಗಲೇ ತಾಯಿಯನ್ನು ಕಳೆದುಕೊಂಡಿದ್ದಾರೆ. ಬಳಿಕ ಆಕೆಯ ಪಾಲನೆ ಪೋಷಣೆಯನ್ನು ಅಜ್ಜಿಯೇ ಮಾಡಿಕೊಂಡು ಬಂದಿದ್ದಾರೆ. ಅಲ್ಲದೇ ಸ್ನೋವಿಯ ತಂದೆ ಬೇರೆ ಮದುವೆಯಾಗಿ ಪ್ರತ್ಯೇಕವಾಗಿ ವಾಸವಾಗಿದ್ದು, ಸ್ನೋವಿ ತನ್ನ ಅಜ್ಜಿ ಜೊತೆ ಇದ್ದಾಳೆ. ಆದ್ದರಿಂದ ಅಜ್ಜಿ ಜಾಗ ಪಾಲು ಮಾಡುವಾಗ ತನ್ನ ಮೊಮ್ಮಗಳಿಗೂ ಒಂದು ಪಾಲು ಇಟ್ಟಿದ್ದರು. ಇದು ಮಾವ ಜಾನ್ಸನ್ ಇವರಿಗೆ ಕಿರುಕುಳ ನೀಡಲು ಕಾರಣ ಎನ್ನಲಾಗಿದೆ.

ABOUT THE AUTHOR

...view details