ಕರ್ನಾಟಕ

karnataka

ETV Bharat / state

ಬಂಟ್ವಾಳ: ಬಿ.ಸಿ. ರೋಡ್​ನಲ್ಲಿ ಯುವಕನಿಗೆ ಮಾರಕಾಸ್ತ್ರಗಳಿಂದ ಇರಿದು ದುಷ್ಕರ್ಮಿಗಳು ಪರಾರಿ - ಬಂಟ್ವಾಳ ಪೊಲೀಸ್​ ಠಾಣೆ

ದಕ್ಷಿಣ ಕನ್ನಡದ ಬಂಟ್ವಾಳದ ಬಿ.ಸಿ ರೋಡ್​ನಲ್ಲಿ ಯುವಕನಿಗೆ ಮಾರಕಾಸ್ತ್ರಗಳಿಂದ ಇರಿದು ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ನಡೆದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Assault on a young man on BC Road
ಯುವಕನಿಗೆ ಮಾರಕಾಸ್ತ್ರಗಳಿಂದ ಇರಿದು ದುಷ್ಕರ್ಮಿಗಳು ಪರಾರಿ

By

Published : Apr 4, 2021, 10:59 PM IST

ಬಂಟ್ವಾಳ(ದಕ್ಷಿಣ ಕನ್ನಡ): ನಗರದ ಬಿ.ಸಿ. ರೋಡ್​ನಲ್ಲಿ ಬೈಕ್​ನಲ್ಲಿ ಬಂದ ದುಷ್ಕರ್ಮಿಗಳು ಯುವಕನಿಗೆ ಮಾರಕಾಸ್ತ್ರಗಳಿಂದ ಇರಿದು ಪರಾರಿಯಾಗಿದ್ದಾರೆ.

ತಾಲೂಕಿನ ಉಮ್ಮಣ್ಣಗುಡ್ಡೆ ನಿವಾಸಿ ಮನೋಜ್ (30) ಗಾಯಗೊಂಡಿರುವ ಯುವಕ. ಕೂಡಲೇ ಗಾಯಾಳುವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ವಿದೇಶದಲ್ಲಿ ಸಿವಿಲ್ ಇಂಜಿನಿಯರ್ ಆಗಿರುವ ಮನೋಜ್ ಎರಡು ವಾರಗಳ ಹಿಂದಷ್ಟೇ ಊರಿಗೆ ಬಂದಿದ್ದರು. ಸದ್ಯದಲ್ಲೇ ವಿವಾಹ ಸಹ ನಿಗದಿಯಾಗಿತ್ತು. ಘಟನಾ ಸ್ಥಳಕ್ಕೆ ಬಂಟ್ವಾಳ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

...view details