ಕರ್ನಾಟಕ

karnataka

ETV Bharat / state

ಗಾಂಜಾ ಮತ್ತಿನಲ್ಲಿ ಕುಟುಂಬದ ಮೇಲೆ ಹಲ್ಲೆ: ಮಂಗಳೂರಿನಲ್ಲಿ ಇಬ್ಬರ ಬಂಧನ - Kankanady Countryside Police Station

ಗಾಂಜಾ ಸೇವಿಸಿ ಕುಟುಂಬವೊದರ ಮೇಲೆ ಹಲ್ಲೆ ಮಾಡಿರುವ ಘಟನೆ ಮಂಗಳೂರು ಬಳಿಯ ಪಚ್ಚನಾಡಿಯಲ್ಲಿ ನಡೆದಿದೆ.

dsd
ಗಾಂಜಾ ಮತ್ತಿನಲ್ಲಿ ಕುಟುಂಬದ ಮೇಲೆ ಹಲ್ಲೆ

By

Published : Oct 5, 2020, 10:16 AM IST

ಮಂಗಳೂರು: ಗಾಂಜಾ ಸೇವಿಸಿ ಮನೆಗೆ ನುಗ್ಗಿದ ತಂಡವೊಂದು ಮನೆ ಮಂದಿಗೆ ತಲವಾರು ತೋರಿಸಿ ಬೆದರಿಸಿ ಹಲ್ಲೆ ನಡೆಸಿರುವ ಘಟನೆ ನಗರದ ಹೊರವಲಯದಲ್ಲಿರುವ ಪಚ್ಚನಾಡಿಯಲ್ಲಿ ನಡೆದಿದೆ.

ಗಾಂಜಾ ಮತ್ತಿನಲ್ಲಿ ಕುಟುಂಬದ ಮೇಲೆ ಹಲ್ಲೆ

ಫ್ರಾನ್ಸಿಸ್ ಎಂಬುವರ ಮನೆಗೆ ತಡರಾತ್ರಿ ನುಗ್ಗಿದ ನಿತಿನ್ ಮತ್ತು ಮಹೇಶ್ ತಂಡ ದಾಂಧಲೆ ನಡೆಸಿದೆ. ತಲವಾರು​ ಹಿಡಿದು ಗಲಾಟೆ ಮಾಡಿರುವ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ. ಸ್ಥಳೀಯರು ನೀಡಿರುವ ಮಾಹಿತಿಯ ಪ್ರಕಾರ ನಿತಿನ್ ಎಂಬಾತ ಸ್ಥಳೀಯ ರೌಡಿಶೀಟರ್ ಆಗಿದ್ದು, ಗಾಂಜಾ ಮತ್ತಿನಲ್ಲಿ ಪಚ್ಚನಾಡಿ ಸುತ್ತಲಿನ ಪರಿಸರದಲ್ಲಿ ರೌಡಿಸಂ ಮಾಡುತ್ತಿದ್ದಾನೆ ಎಂಬ ಆರೋಪವಿದೆ.

ಈ ಬಗ್ಗೆ ಪ್ರಶ್ನೆ ಮಾಡಿದರೆ ರಾತ್ರಿ ವೇಳೆ ಮನೆಗೆ ನುಗ್ಗಿ ಹಲ್ಲೆ ನಡೆಸುತ್ತಾನಂತೆ. ಈಗ ಫ್ರಾನ್ಸಿಸ್ ಹಾಗೂ ಆತನ ತಾಯಿಯ ಮೇಲೆ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದ್ದಾರೆ. ಘಟನೆ ಸಂಬಂಧ ಕಂಕನಾಡಿ ಗ್ರಾಮಾಂತರ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ABOUT THE AUTHOR

...view details