ಕರ್ನಾಟಕ

karnataka

ETV Bharat / state

ಸುಳ್ಯ: ಸಿನೆಮಾ ನೋಡಲು ಬಂದ ಯುವಕ, ಯುವತಿ ಮೇಲೆ ಹಲ್ಲೆ - ಈಟಿವಿ ಭಾರತ ಕನ್ನಡ

ಸಿನೆಮಾ ನೋಡಲು ಬಂದ ಯುವಕ ಹಾಗೂ ಯುವತಿಗೆ ಥಳಿಸಿದ ಘಟನೆಯ ಸಂಬಂಧ ಸುಳ್ಯ ಪೊಲೀಸ್​​ ಠಾಣೆಯಲ್ಲಿ ಐವರ ವಿರುದ್ದ ಪ್ರಕರಣ ದಾಖಲಾಗಿದೆ.

assault-case-against-five-people-in-sulya
ಸುಳ್ಯ: ಸಿನೆಮಾ ನೋಡಲು ಬಂದ ಯುವಕ, ಯುವತಿ ಮೇಲೆ ಹಲ್ಲೆ

By

Published : Dec 8, 2022, 10:35 PM IST

ಸುಳ್ಯ(ದಕ್ಷಿಣ ಕನ್ನಡ):ನಗರದ ಸಂತೋಷ್ ಚಿತ್ರಮಂದಿರದಲ್ಲಿ ಕಾಂತಾರ ಸಿನೆಮಾ ನೋಡಲು ಬಂದ ಯುವಕ ಹಾಗೂ ಯುವತಿಗೆ ಥಳಿಸಲಾಗಿದ್ದು, ಸುಳ್ಯ ಪೊಲೀಸ್​​ ಠಾಣೆಯಲ್ಲಿ ಐವರ ವಿರುದ್ಧ ಕೇಸು ದಾಖಲಾಗಿದೆ. ಹಲ್ಲೆಗೊಳಗಾದ ಬಂಟ್ವಾಳದ ಬಿಮೂಡ ಗ್ರಾಮದ ಮೊಹಮ್ಮದ್ ಇಮ್ತಿಯಾಜ್ ಎಂಬಾತ ನೀಡಿದ ದೂರಿನ ಆಧಾರದ ಮೇಲೆ ಕೇಸು ದಾಖಲಿಸಲಾಗಿದೆ.

ಯುವಕ ತನಗೆ ಪರಿಚಯವಿದ್ದ ಯುವತಿಯ ಭೇಟಿಗೆಂದು ಸುಳ್ಯಕ್ಕೆ ಬಂದಿದ್ದ. ಈ ವೇಳೆ ಇಬ್ಬರೂ ಸುಳ್ಯದ ಸಂತೋಷ್ ಚಿತ್ರಮಂದಿರಕ್ಕೆ ಸಿನೆಮಾ ನೋಡಲು ಹೋಗಿದ್ದರು. ಆಗ ಸಿನೆಮಾ ಆರಂಭಕ್ಕೆ ತಡವಿದ್ದ ಕಾರಣ ಚಿತ್ರಮಂದಿರದ ಆವರಣದಲ್ಲಿ ಮಾತನಾಡುತ್ತಾ ನಿಂತಾಗ ಯುವಕರ ಗುಂಪೊಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಮನಬಂದಂತೆ ಥಳಿಸಿದೆ ಎಂದು ದೂರಲಾಗಿದೆ.

ಈ ಸಂಬಂಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಅಬ್ದುಲ್ ಹಮೀದ್, ಅಶ್ರಫ್, ಸಾದಿಕ್, ಜಾಬಿರ್ ಜಟ್ಟಿಪಳ್ಳ ಸಿದ್ದಿಕ್ ಬೋರುಗುಡ್ಡೆ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಇನ್​​​ಸ್ಟಾದಲ್ಲಿ ಪರಿಚಯವಾದ ಬಾಲಕಿಗೆ ಲೈಂಗಿಕ ದೌರ್ಜನ್ಯ: ಬಾಲಕನ ವಿರುದ್ಧ ಪೋಕ್ಸೋ ಕೇಸು

ABOUT THE AUTHOR

...view details