ಬಂಟ್ವಾಳ: ಲಕ್ಷ್ಮೀಕಾಂತ ಭಟ್ ಹೆಸರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಾಗಲಕೋಟೆ ಮೂಲದ ಹನುಮಂತಪ್ಪ ಎಂಬ ಜ್ಯೋತಿಷಿ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ.
ಬಂಟ್ವಾಳ: ಜ್ಯೋತಿಷಿ ಮೇಲೆ ಅಪರಿಚಿತರಿಂದ ಹಲ್ಲೆ - ಬಂಟ್ವಾಳ ಪೊಲೀಸ್ ಠಾಣೆ
ಬಿ.ಸಿ. ರೋಡ್ನ ವಾಣಿಜ್ಯ ಸಂಕೀರ್ಣವೊಂದರಲ್ಲಿ ಲಕ್ಷ್ಮೀಕಾಂತ್ ಭಟ್ ಹೆಸರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಾಗಲಕೋಟೆ ಮೂಲದ ಜ್ಯೋತಿಷಿ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ.
ಜ್ಯೋತಿಷಿ ಮೇಲೆ ಅಪರಿಚಿತರಿಂದ ಹಲ್ಲೆ
ಇಬ್ಬರಿಂದ ಈ ಕೃತ್ಯ ನಡೆದಿದ್ದು, ಗಾಯಗೊಂಡ ಜ್ಯೋತಿಷಿಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸದ್ಯ ಸ್ಥಳಕ್ಕೆ ಭೇಟಿ ನೀಡಿದ ಬಂಟ್ವಾಳ ಪೊಲೀಸರು ಪರಿಶೀಲನೆ ನಡೆಸಿದ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.