ಕರ್ನಾಟಕ

karnataka

ETV Bharat / state

ಬ್ಯಾಂಕ್ ಅಧಿಕಾರಿ ಮೇಲೆ ಹಲ್ಲೆ, ಸುಲಿಗೆ ಪ್ರಕರಣ: ಎಂಟು ಮಂದಿಗೆ ಮೂರು ವರ್ಷ ಕಠಿಣ ಶಿಕ್ಷೆ

ಮಂಗಳೂರಿನಲ್ಲಿ ಬ್ಯಾಂಕ್ ಅಧಿಕಾರಿಯ ಮೇಲೆ ಹಲ್ಲೆ ನಡೆಸಿ ಸುಲಿಗೆ ಮಾಡಿರುವ ಎಂಟು ಜನ ತಪ್ಪಿತಸ್ಥರಿಗೆ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮೂರು ವರ್ಷ ಕಠಿಣ ಸಜೆ ಹಾಗೂ ತಲಾ 2 ಸಾವಿರ ರೂ. ದಂಡ ವಿಧಿಸಿದೆ.

assault-and-extortion-of-bank-officer-in-mangalore
ಬ್ಯಾಂಕ್ ಅಧಿಕಾರಿಗೆ ಮೇಲೆ ಹಲ್ಲೆ, ಸುಲಿಗೆ: ಎಂಟು ಆರೋಪಿಗಳಿಗೆ ಮೂರು ವರ್ಷ ಕಠಿಣ ಶಿಕ್ಷೆ

By

Published : Mar 11, 2020, 10:20 PM IST

ಮಂಗಳೂರು: ಬ್ಯಾಂಕ್‌ ಅಧಿಕಾರಿಯೋರ್ವರ ಮೇಲೆ ಹಲ್ಲೆ ನಡೆಸಿ, ಸುಲಿಗೆ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಂಟು ಮಂದಿ ಅಪರಾಧಿಗಳಿಗೆ ಮೂರು ವರ್ಷ ಕಠಿಣ ಸಜೆ ಹಾಗೂ ತಲಾ 2 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದೆ.

ಹರೀಶ್ ಉದಿಯಾವರ ಅವರಿಂದ ಪ್ರಕರಣದ ಕುರಿತು ಮಾಹಿತಿ

ಪ್ರಕರಣದ ಹಿನ್ನೆಲೆ:ಪ್ರಕರಣವು 2016 ಸೆಪ್ಟಂಬರ್ 18ರಂದು ನಡೆದಿದ್ದು, ಇದರ ರೂವಾರಿ ಶಿಲ್ಪಾ(23) ಎಂಬಾಕೆ ಈ ಸಂಚನ್ನು ರೂಪಿಸಿದ್ದಾಳೆ‌. ಕೊಣಾಜೆಯ ಪದವು ಎಂಬಲ್ಲಿನ ಅವಿನಾಶ್ (21), ಕುತ್ತಾರು ಪದವಿನ ಯತೀಶ್(22), ರಂಜಿತ್(19), ದೇರಳಕಟ್ಟೆಯ ನಿತಿನ್ (19), ಕೊಣಾಜೆಯ‌ ನಿತಿನ್(20), ಬೋಂದೆಲ್ ಚರ್ಚ್ ಬಳಿ ನಿವಾಸಿ ಸಚಿನ್(19), ಕೋಟೆಕಾರು ಬೀರಿ ನಿವಾಸಿ ಕುಮಾರಿ ತೃಪ್ತಿ(21) ಆಕೆಯ ಸಹವರ್ತಿಗಳಾಗಿದ್ದಾರೆ.

2016 ಸೆಪ್ಟಂಬರ್ 18ರಂದು ಮಧ್ಯಾಹ್ನ ಶಿಲ್ಪಾ ರೂಪಿಸಿದ್ದ ಸಂಚಿನಂತೆ ನಗರದ ಬಳ್ಳಾಲ್ ಬಾಗ್ ಬಳಿಯಿರುವ ಭಾರತಿ ಅಪಾರ್ಟ್​ಮೆಂಟ್ ನಲ್ಲಿರುವ ಬ್ಯಾಂಕ್ ಅಧಿಕಾರಿವೋರ್ವರ ಮನೆಗೆ ತೃಪ್ತಿ ಮತ್ತು ಇತರೆ ಇಬ್ಬರು ಆರೋಪಿಗಳು ತೆರಳಿ ಬ್ಯಾಂಕ್ ಪರೀಕ್ಷೆಯ ತರಬೇತಿ ನೀಡುತ್ತೇವೆ ಎಂದು ಹೇಳಿ ನಂಬಿಸಿದ್ದರು. ಮಾತನಾಡುತ್ತಿರುವಾಗಲೇ ಯತೀಶ್ ಎಂಬಾತ ಬ್ಯಾಂಕ್ ಅಧಿಕಾರಿಗೆ ಹೊಡೆದಿದ್ದಾನೆ. ತಕ್ಷಣ ಎಲ್ಲರೂ ಸೇರಿ ಅವರನ್ನು ಕೋಣೆಯೊಳಗೆ ಕೂಡಿ ಹಾಕಿ ತೃಪ್ತಿಯೊಂದಿಗೆ ನಿಲ್ಲಿಸಿ ಫೋಟೋ ತೆಗೆದಿದ್ದರು. ಆ ಬಳಿಕ ಆ ಫೋಟೋವನ್ನು ಮೀಡಿಯಾದಲ್ಲಿ ಹಾಕಿ ಮಾನ ಹರಾಜು ಮಾಡುತ್ತೇವೆ ಎಂದು ಹೇಳಿ ಒಂದು ಲಕ್ಷ ರೂ. ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಈ ಸಂದರ್ಭ ಅವರಲ್ಲಿದ್ದ 2,300 ರೂ. ಕಿತ್ತುಕೊಂಡು, ಎರಡು ಖಾಲಿ ಚೆಕ್ ಗಳಿಗೆ ಸಹಿ ಹಾಕಿಸಿ, ಅವರ ಮಗನ ಸ್ಕೂಟರ್ ನ ಆರ್​ಸಿ ಯನ್ನು ಸುಲಿಗೆ ಮಾಡಿದ್ದರು. ಅಲ್ಲದೆ 90 ಸಾವಿರ ರೂ. ಹಣಕ್ಕೆ ಬೇಡಿಕೆಯಿಟ್ಟಿದ್ದರು. ವಿಷಯವನ್ನು ಯಾರಿಗಾದರೂ ಹೇಳಿದ್ದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆಯನ್ನೂ ಹಾಕಿದ್ದರು.

ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪೊಲೀಸ್ ನಿರೀಕ್ಷಕ ಎ.ಕೆ. ರಾಜೇಶ್ ಪ್ರಕರಣ ದಾಖಲಿಸಿದ್ದರು. ಈ ಆರೋಪವು ಸಾಬೀತಾದ ಹಿನ್ನೆಲೆಯಲ್ಲಿ ಸೆಕ್ಷನ್ 120(ಬಿ) ಸಂಚು ರೂಪಿಸಿರುವುದಕ್ಕೆ 3 ವರ್ಷ ಕಠಿಣ ಸಜೆ. ತಲಾ 2 ಸಾವಿರ ರೂ. ದಂಡ, (448) ಅಕ್ರಮ ಪ್ರವೇಶಕ್ಕೆ ತಲಾ 1 ಸಾವಿರ ರೂ. ದಂಡ, (395) ದರೋಡೆ ಮಾಡಿರುವುದಕ್ಕೆ ತಲಾ 2 ಸಾವಿರ ರೂ. ದಂಡ, (506) ಕೊಲೆ ಬೆದರಿಕೆ ಒಡ್ಡಿರೋದಕ್ಕೆ 6 ತಿಂಗಳು ಸಾದಾ ಸಜೆ ಹಾಗೂ ತಲಾ 1000 ಸಾವಿರ ರೂ. ದಂಡ ವಿಧಿಸಿ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ರಾಮಲಿಂಗೇಗೌಡ ಆದೇಶ ಪ್ರಕಟಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details