ಕರ್ನಾಟಕ

karnataka

ETV Bharat / state

ಬರ್ತಡೇ ಪಾರ್ಟಿ ಯುವತಿ ಮೇಲೆ ಹಲ್ಲೆ ಪ್ರಕರಣ : ಮಂಗಳೂರಲ್ಲಿ ಪಾಗಲ್ ಪ್ರೇಮಿ ಸಹಿತ ಮೂವರು ಅರೆಸ್ಟ್​ - ಮಂಗಳೂರಿನ ಕದ್ರಿ ಪೊಲೀಸರಿಂದ ಹಲ್ಲೆ ಆರೋಪಿಗಳ ಬಂಧನ

ಬರ್ತ್ ಡೇ ಪಾರ್ಟಿ ವೇಳೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಗಳೂರು ಕದ್ರಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

Assault Accused arrested in Managaluru
ಪಾಗಲ್ ಪ್ರೇಮಿ ಸಹಿತ ಮೂವರ ಬಂಧನ

By

Published : Feb 1, 2021, 3:49 PM IST

ಮಂಗಳೂರು : ಹೊಟೇಲ್​ನಲ್ಲಿ ಬರ್ತಡೇ ಪಾರ್ಟಿ ಸಂಭ್ರಮದಲ್ಲಿದ್ದ ಯುವತಿ ಹಾಗೂ ಆಕೆಯ ಸ್ನೇಹಿತರ ಮೇಲೆ ಹಲ್ಲೆ ಮಾಡಿ ದಾಂಧಲೆ ನಡೆಸಿದ ಮೂವರು ಆರೋಪಿಗಳನ್ನು ಕದ್ರಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬೋಳೂರು ಬೊಕ್ಕಪಟ್ಣ ನಿವಾಸಿ ತ್ರಿಶೂಲ್ ಸಾಲ್ಯಾನ್, ಕೋಡಿಕಲ್ ಕಲ್ಲಕಂಡ ನಿವಾಸಿ ಸಂತೋಷ್ ಪೂಜಾರಿ ಹಾಗೂ ಅಶೋಕನಗರ ಫಲ್ಗುಣಿ ನಗರ ನಿವಾಸಿ ಡ್ಯಾನಿಶ್ ಬಂಧಿತರು.

ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್

ಪ್ರಕರಣದ ಹಿನ್ನೆಲೆ : ಯುವತಿಯ ಹೆತ್ತವರು ಕೆನಡಾದಲ್ಲಿ ನೆಲೆಸಿದ್ದು, ಆಕೆ ಪುತ್ತೂರಿನ ಕೋಲ್ಕಡದಲ್ಲಿ ಅಜ್ಜಿ ಮನೆಯಲ್ಲಿ ವಾಸವಿದ್ದಾಳೆ. ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾಳೆ‌. ಒಂದೂವರೆ ವರ್ಷದಿಂದ ಆರೋಪಿ ತ್ರಿಶೂಲ್​ನೊಂದಿಗೆ ಸ್ನೇಹದಿಂದಿದ್ದ ಯುವತಿಗೆ, ಆತ ತನ್ನೊಂದಿಗೆ ಸಂಪರ್ಕ ಮುಂದುವರಿಸಬೇಕು, ಪ್ರೀತಿ ಮಾಡಬೇಕು ಎಂದು ಸತಾಯಿಸುತ್ತಿದ್ದ. ಹಾಗಾಗಿ, ಯುವತಿ ತ್ರಿಶೂಲ್​ನೊಂದಿಗಿನ ಸಂಬಂಧ ಮುರಿಯುತ್ತೇನೆ ಎಂದು ಆತ ಕೊಟ್ಟಿರುವ ಗಿಫ್ಟ್ ಹಾಗೂ ಉಂಗುರವನ್ನು ಹಿಂದಿರುಗಿಸಲು, ಜ.30 ರಂದು ತಾನಿರುವ ಹಾಸ್ಟೆಲ್​ಗೆ ಕರೆಸಿಕೊಂಡಿದ್ದಳು. ಅಲ್ಲಿ, ಆರೋಪಿ ತ್ರಿಶೂಲ್​ ಸಿಟ್ಟಾಗಿ, ಅನುಚಿತವಾಗಿ ವರ್ತಿಸಿ, 'ನಿನ್ನನ್ನು ಜೀವಂತವಾಗಿ ಬಿಡುವುದಿಲ್ಲ' ಎಂದು ಚಾಕು ತೋರಿಸಿದ್ದಾನೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮಾಹಿತಿ ನೀಡಿದ್ದಾರೆ.

ಇದಾದ, ಬಳಿಕ ಯುವತಿ ತನ್ನ ಸ್ನೇಹಿತರೊಂದಿಗೆ ಸ್ನೇಹಿತೆಯೋರ್ವಳ ಬರ್ತಡೇ ಪಾರ್ಟಿ ನಡೆಸಲು ಕದ್ರಿ ಠಾಣಾ ವ್ಯಾಪ್ತಿಯಲ್ಲಿರುವ ಹೊಟೇಲ್​ಗೆ ತೆರಳಿದ್ದಳು. ಈ ವೇಳೆ ತ್ರಿಶೂಲ್ ತನ್ನ ಸ್ನೇಹಿತರನ್ನು ಕರೆಯಿಸಿ ಏಕಾಏಕಿ ಹೋಟೆಲ್​ಗೆ ನುಗ್ಗಿ ಹೆಲ್ಮೆಟ್, ಕೈ ಹಾಗೂ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ‌. ಘಟನೆಯಲ್ಲಿ ಪ್ರತೀಕ್ಷ್ ಎಂಬ ಯುವಕನ ಮೈಮೇಲೆ ನಾಲ್ಕೈದು ಕಡೆಗಳಲ್ಲಿ ಚಾಕು ಇರಿತದಿಂದ ಗಾಯಗಳಾಗಿವೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ‌. ಯುವತಿ ನೀಡಿರುವ ದೂರಿನ ಆಧಾರದಲ್ಲಿ ಕದ್ರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ABOUT THE AUTHOR

...view details