ಪುತ್ತೂರು: ನಾಡಿನೆಲ್ಲೆಡೆ ದೀಪಾವಳಿ ಸಡಗರ ಮನೆ ಮಾಡಿದೆ ಪುತ್ತೂರಿನ ಉದ್ಯಮಿ ಅಶೋಕ್‍ಕುಮಾರ್ ರೈ ಕೋಡಿಂಬಾಡಿ ಅವರ ಮನೆಯಲ್ಲಿ ಮಂಗಳವಾರ ಕಾರ್ಯಕ್ರಮ ನಡೆಸಿ ಮಹಿಳೆಯರಿಗೆ ಸೀರೆ, ಮತ್ತು ಪುರುಷರಿಗೆ ಪಂಚೆ ಶಾಲು, ಮಕ್ಕಳಿಗೆ ಶಾಲು ನೀಡಿ ಜನರ ಪ್ರೀತಿಗಳಿಸುವ ಜತೆಗೆ ಹಿರಿಯರಿಂದ ಆಶೀರ್ವಾದ ಪಡೆದುಕೊಂಡರು.
ಬಡವರಿಗೆ ಸೀರೆ ಪಂಚೆ ವಿತರಿಸಿದ- ಉದ್ಯಮಿ ಅಶೋಕ್ ಕುಮಾರ್ ರೈ - ಪುತ್ತೂರಿನ ಉದ್ಯಮಿ ಅಶೋಕ್‍ಕುಮಾರ್ ರೈ
ಪುತ್ತೂರಿನ ಉದ್ಯಮಿ ಅಶೋಕ್‍ಕುಮಾರ್ ರೈ ಕೋಡಿಂಬಾಡಿ ಅವರ ಮನೆಯಲ್ಲಿ ಮಂಗಳವಾರ ಕಾರ್ಯಕ್ರಮ ನಡೆಸಿ ಮಹಿಳೆಯರಿಗೆ ಸೀರೆ, ಮತ್ತು ಪುರುಷರಿಗೆ ಪಂಚೆ ಶಾಲು, ಮಕ್ಕಳಿಗೆ ಶಾಲು ನೀಡಿ ಜನರ ಪ್ರೀತಿಗಳಿಸುವ ಜತೆಗೆ ಹಿರಿಯರಿಂದ ಆಶೀರ್ವಾದ ಪಡೆದುಕೊಂಡರು.
ಸೀರೆ ಪಂಚೆ ವಿತರಿಸಿದ- ಅಶೋಕ್ ಕುಮಾರ್ ರೈ
ಅಶೋಕ್ ಕುಮಾರ್ ರೈ ಮಾತನಾಡಿ, ದೀಪಾವಳಿಯ ಅಂಗವಾದ ಈ ಸಾಂಪ್ರದಾಯಿಕವಾಗಿ ವಸ್ತ್ರ ವಿತರಣೆಯ ಕಾರ್ಯಕ್ರಮ ಯಾವುದೇ ಹೆಸರಿಗಾಗಿ ನಡೆಸುತ್ತಿಲ್ಲ. ಇದೊಂದು ಪ್ರೀತಿ ಹಂಚುವ ಕಾರ್ಯಕ್ರಮ. ಈ ವರ್ಷ 15,000 ಮಂದಿಗೆ ಸೀರೆ ಹಾಗೂ ಪಂಚೆಯನ್ನು ವಿತರಿಸಲಾಗುವುದು ಎಂದು ಹೇಳಿದರು.
ವೇದಿಕೆಯಲ್ಲಿ ಸುಮಾ ಅಶೋಕ್‍ಕುಮಾರ್ ರೈ, ಸೇರಿದಂತೆ ಅವರ ಮನೆಯವರು ಭಾಗಿಯಾಗಿದ್ದರು. ಕೊಡಂಬಾಡಿಯ ರೈ ನಿವಾಸದಲ್ಲಿ ಕಳೆದ ಬಾರಿಯ ದೀಪಾವಳಿಯಂದು 12,600 ಮಂದಿಗೆ ವಸ್ತ್ರ ವಿತರಣೆ ಮಾಡಲಾಗಿತ್ತು.