ಕರ್ನಾಟಕ

karnataka

ETV Bharat / state

ಊರಿಗೆ ಬರಲು ಒಂದೇ ದಿನ ಬಾಕಿ ಇತ್ತು! ಹೃದಯಾಘಾತದಿಂದ ಮೃತಪಟ್ಟ ಮಂಗಳೂರಿನ ಯೋಧ - ಸಶಸ್ತ್ರ ಸೀಮಾ ಬಲ್

ಕರ್ತವ್ಯದಲ್ಲಿದ್ದ ವೇಳೆ ಹೃದಯಾಘಾತದಿಂದ ಮೃತಪಟ್ಟ ಯೋಧ ಮುರಳಿಧರ್ ರೈ ಪಾರ್ಥಿವ ಶರೀರ ಹುಟ್ಟೂರು ಮಂಗಳೂರಿಗೆ ಆಗಮಿಸಿದೆ. ಇಂದು ಶಕ್ತಿನಗರದಲ್ಲಿರುವ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

warrior dead body
ಯೋಧನ ಪಾರ್ಥಿವ ಶರೀರ

By

Published : Jan 25, 2023, 11:08 AM IST

ಮಂಗಳೂರಿಗೆ ಯೋಧನ ಪಾರ್ಥಿವ ಶರೀರ ಆಗಮನ

ಮಂಗಳೂರು: ಭೋಪಾಲ್​ನಲ್ಲಿ‌ ಸಶಸ್ತ್ರ ಸೀಮಾ ಬಲ್​ನಲ್ಲಿ ಕರ್ತವ್ಯದಲ್ಲಿದ್ದಾಗ ಹೃದಯಾಘಾತದಿಂದ ಮೃತಪಟ್ಟಿದ್ದ ಯೋಧನ ಪಾರ್ಥಿವ ಶರೀರ ಹುಟ್ಟೂರು ಮಂಗಳೂರಿಗೆ ಆಗಮಿಸಿದೆ. ಶಕ್ತಿನಗರ ನಿವಾಸಿ ಮುರಳಿಧರ್ ರೈ (37) ಮೃತಪಟ್ಟ ಯೋಧ. ಕರ್ತವ್ಯದಲ್ಲಿದ್ದಾಗ ಸೋಮವಾರ ಮುಂಜಾನೆ ಮಲಗಿದ್ದಲ್ಲೇ ಇವರು ಕೊನೆಯುಸಿರೆಳೆದಿದ್ದರು.

ನಿನ್ನೆ ಪಾರ್ಥಿವ ಶರೀರ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿತ್ತು. ವಿಮಾನ ನಿಲ್ದಾಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್ ಸೇರಿದಂತೆ ಜಿಲ್ಲಾಡಳಿತದಿಂದ ಸಕಲ ಸರ್ಕಾರಿ ಗೌರವ ನೀಡಲಾಗಿತ್ತು. ಬಳಿಕ ಎ.ಜೆ.ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿತ್ತು. ಇಂದು ಶಕ್ತಿನಗರದ ಮನೆಯಲ್ಲಿ ಅಂತಿಮ ದರ್ಶನಕ್ಕೆ ಏರ್ಪಾಡು ಮಾಡಲಾಗಿದೆ.

2007ರಲ್ಲಿ ಕಾನ್ಸ್‌ಟೇಬಲ್ ಆಗಿ ಸಶಸ್ತ್ರ ಸೀಮಾ ಬಲ್​ಗೆ ಸೇರಿದ್ದ ಮುರಳಿಧರ್ ರೈ ಹವಾಲ್ದಾರ್ ಆಗಿ ಭೋಪಾಲ್​ನಲ್ಲಿ ಕರ್ತವ್ಯದಲ್ಲಿದ್ದರು. ನಿನ್ನೆ ರಜೆ ಮೇಲೆ ಅವರು ಊರಿಗೆ ಬರಬೇಕಾಗಿತ್ತು. ಆದರೆ ಅದಕ್ಕಿಂತ ಒಂದು ದಿನ ಮೊದಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಪತ್ನಿ ಸೇರಿದಂತೆ ಆರು ತಿಂಗಳ ಮಗುವನ್ನು‌ ಅಗಲಿದ್ದಾರೆ‌.

ಇದನ್ನೂ ಓದಿ:ರಜೆಗೆಂದು ಊರಿಗೆ ಬಂದಿದ್ದ ಯೋಧ ಹೃದಯಾಘಾತದಿಂದ ನಿಧನ..

ಊರಿಗೆ ಬಂದಿದ್ದ ಯೋಧನಿಗೆ ಹೃದಯಾಘಾತ: ಇದೇ ತಿಂಗಳ ಪ್ರಾರಂಭದಲ್ಲಿ ರಜೆಗೆಂದು ಮಂಗಳೂರಿಗೆ ಬಂದಿದ್ದ ಬಿಎಸ್‌ಎಫ್ ಯೋಧ ಹಾಗೂ ಕುಲಶೇಖರದ ಉಮಿಕಾನ ನಿವಾಸಿ ಹರೀಶ್ ಕುಮಾರ್ (43) ಹೃದಯಾಘಾತದಿಂದ ಮೃತಪಟ್ಟಿದ್ದರು. ಬಿಎಸ್‌ಎಫ್ ಯೋಧರಾಗಿದ್ದ ಹರೀಶ್​ ಅವರು ಕಳೆದ 21 ವರ್ಷಗಳಿಂದ ಗಡಿ ಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. 142ನೇ ಬೆಟಾಲಿಯನ್ ಒಡಿಶಾದಲ್ಲಿ ಕರ್ತವ್ಯದಲ್ಲಿದ್ದರು.

ಇದನ್ನೂ ಓದಿ:

ನಕ್ಸಲರ ವಿರುದ್ಧದ ಕಾರ್ಯಾಚರಣೆ ವೇಳೆ ಐಇಡಿ ಸ್ಫೋಟ: ಐವರು ಸಿಆರ್​ಪಿಎಫ್​ ಯೋಧರಿಗೆ ಗಾಯ

ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದವರಿಗೆ ಕೆಎಸ್​ಆರ್​ಟಿಸಿ ಬಸ್ ಡಿಕ್ಕಿ.. ಯೋಧ ಸೇರಿ ಇಬ್ಬರು ಸಾವು

ರಸ್ತೆ ಅಪಘಾತದಲ್ಲಿ ಯೋಧ ಮೃತ: ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಶೀಲವಂತ ಸೋಮಾಪುರ ಗ್ರಾಮದ ಶಿವರಾಜ ಗಂಗಮ್ಮನವರ ಎಂಬ ಯೋಧ ಪಂಜಾಬ್‌ನಲ್ಲಿ ಕರ್ತವ್ಯದಲ್ಲಿರುವಾಗಲೇ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಕಳೆದ ವರ್ಷದ ಅಕ್ಟೋಬರ್​ 2022 ರಂದು ಘಟನೆ ನಡೆದಿತ್ತು.

ABOUT THE AUTHOR

...view details