ಕರ್ನಾಟಕ

karnataka

ETV Bharat / state

ಯುವತಿಯ ಅಶ್ಲೀಲ ಫೋಟೋ ಜಾಲತಾಣಗಳಿಗೆ ಅಪ್​ಲೋಡ್​ ಮಾಡಿದ ಆರೋಪಿ ಅಂದರ್​ - Arrested, accused of pornography on social networking site

ಯುವತಿಯನ್ನು ಮದುವೆ ಮಾಡಿಕೊಡಲು ಅವರ ಮನೆಯವರು ವಿರೋಧ ವ್ಯಕ್ತಪಡಿಸಿದ ದ್ವೇಷದಿಂದ ಜಿತೇಶ್ ಎಂಬಾತ ಯುವತಿಯ ಆಶ್ಲೀಲ ಚಿತ್ರಗಳನ್ನು ಸೋಶಿಯಲ್​ ಮಿಡೀಯಾದಲ್ಲಿ ಅಪ್​ಲೋಡ್​ ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಆರೋಪಿ ಅಂದರ್​

By

Published : Sep 21, 2019, 8:07 PM IST

ಮಂಗಳೂರು: ಯುವತಿಯ ಅಶ್ಲೀಲ ಭಾವಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮಂಜೇಶ್ವರ ನಿವಾಸಿ ಜಿತೇಶ್ ಸಪಲ್ಯ ಬಂಧಿತ ಆರೋಪಿ. ಜಿತೇಶ್​ಗೆ ಸಂತ್ರಸ್ತ ಯುವತಿಯೊಂದಿಗೆ 2-3 ವರ್ಷಗಳಿಂದ ಗೆಳೆತನವಿತ್ತು. ಈ ಹಿನ್ನೆಲೆ ಮೇ 8, 2018 ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆಗೆ ಬಂದು ಯುವತಿಯ ಅಶ್ಲೀಲ ಭಾವಚಿತ್ರಗಳನ್ನು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದ.

ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು‌. ಈಗ ಆರೋಪಿಯನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಜಿತೇಶ್​ಗೆ ನ್ಯಾಯಾಂಗ ಬಂಧನ ವಿಧಿಸಿದೆ.

For All Latest Updates

TAGGED:

ABOUT THE AUTHOR

...view details