ಕರ್ನಾಟಕ

karnataka

ETV Bharat / state

ಗಾಂಜಾ ಮಾರಾಟ ಯತ್ನ: ಫರಂಗಿಪೇಟೆಯಲ್ಲಿ ಯುವಕ ಅರೆಸ್ಟ್ - ಬಂಟ್ವಾಳ ಕ್ರೈಂ ನ್ಯೂಸ್​

ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಯುವಕನನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬುಧವಾರ ಸಂಜೆ ಬಂಧಿಸಿದ್ದಾರೆ. ಫರಂಗಿಪೇಟೆ ನಿವಾಸಿ ಮೊಹಮ್ಮದ್ ಅಜರುದ್ದೀನ್ ಬಂಧಿತ ಎಂದು ಗುರುತಿಸಲಾಗಿದೆ.

Bantwal
ಬಂಧಿತ ಆರೋಪಿ

By

Published : Sep 30, 2020, 11:34 PM IST

ಬಂಟ್ವಾಳ: ಫರಂಗಿಪೇಟೆಯಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಯುವಕನೋರ್ವನನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬುಧವಾರ ಸಂಜೆ ಬಂಧಿಸಿದ್ದಾರೆ.

ಪರಂಗೀಪೇಟೆ ನಿವಾಸಿ ಮೊಹಮ್ಮದ್ ಅಜರುದ್ದಿನ್ (25) ಬಂಧಿತ ಆರೋಪಿ. ಈತನಿಂದ 4 ಸಾ.ರೂ ಮೌಲ್ಯದ 235 ಗ್ರಾಂ ಗಾಂಜಾ ಹಾಗೂ ಇದಕ್ಕೆ ಬಳಸಿದ್ದ ಸುಜುಕಿ ಆಕ್ಸಿಸ್ ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ವೆಲೆಂಟೈನ್ ಡಿಸೋಜ ಮತ್ತು ಬಂಟ್ವಾಳ ವೃತ್ತ ನಿರೀಕ್ಷರಾದ ಟಿ.ಡಿ.ನಾಗರಾಜ ಅವರ ನಿರ್ದೇಶನದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್​ಐ ಪ್ರಸನ್ನ, ಪ್ರೊಬೆಷನರಿ ಪಿಎಸ್ಐ ನಸ್ರಿನ್ ತಾಜ್ ಮತ್ತವರ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದಾರೆ.

ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ. ಈಗಾಗಲೇ ಗಾಂಜಾ ಹೊಂದಿರುವ ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ನಗರ ಠಾಣೆ ಮತ್ತು ವಿಟ್ಲ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ಕಳೆದ ಎರಡು ವಾರಗಳ ಅವಧಿಯಲ್ಲಿ ಬಂಟ್ವಾಳ ವೃತ್ತ ವ್ಯಾಪ್ತಿಯಲ್ಲಿ ದಾಖಲಾಗುತ್ತಿರುವ ಮೂರನೇ ಪ್ರಕರಣವಾಗಿದೆ.

ABOUT THE AUTHOR

...view details