ಮಂಗಳೂರು: ಮಹಿಳೆ ಹೆಸರಿನಲ್ಲಿ ಫೇಸ್ಬುಕ್ ಖಾತೆ ತೆರೆದು, ಖಾಸಗಿ ಫೋಟೋಗಳನ್ನು ವಿನಿಮಯ ಮಾಡಿಕೊಂಡ ಬಳಿಕ ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರನ್ನು ಮಂಗಳೂರು ಸೈಬರ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಹುಡುಗಿ ಹೆಸರಲ್ಲಿ ಖಾತೆ ತೆರೆದು ಆ ಫೋಟೊ ಕಳಿಸಿದ ನಂತರ ಬ್ಲಾಕ್ಮೇಲ್... ಇಬ್ಬರ ಬಂಧನ - ಮಂಗಳೂರು ಸೈಬರ್ ಪೊಲೀಸರಿಂದ ಇಬ್ಬರ ಬಂಧನ
ಮಹಿಳೆ ಹೆಸರಲ್ಲಿ ಫೇಸ್ ಬುಕ್ ಖಾತೆ ತೆರೆದು, ವ್ಯಕ್ತಿಯೊಂದಿಗೆ ಖಾಸಗಿ ಫೋಟೋ ವಿನಿಮಯ ಮಾಡಿಕೊಂಡು ಹಣಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರನ್ನು ಮಂಗಳೂರು ಸೈಬರ್ ಪೊಲೀಸರು ಖೆಡ್ಡಾಗೆ ಕೆಡವಿದ್ದಾರೆ.
ಬೆಂಗಳೂರಿನ ಗೋಕುಲ್ ರಾಜ್(20) ಹಾಗೂ ಪವನ್ (20) ಬಂಧಿತ ಆರೋಪಿಗಳು. ಈ ಇಬ್ಬರೂ ಸಾಕ್ಷಿರಾಜ್ ಎಂದು ಮಹಿಳೆಯ ಹೆಸರಿನಲ್ಲಿ ನಕಲಿ ಎಫ್ ಬಿ ಖಾತೆ ತೆರೆದು, ಮಂಗಳೂರಿನ ರಾಜೇಶ್ ಎಂಬ ವ್ಯಕ್ತಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಾರೆ. ನಂತರ ಅವರಿಗೆ ಮಹಿಳೆಯ ಅಶ್ಲೀಲ, ಖಾಸಗಿ ಫೋಟೋಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ. ರಾಜೇಶ್ ನಲ್ಲಿಯೂ ಅವರ ಬೆತ್ತಲೆ ಫೋಟೋ ರವಾನಿಸಲು ಹೇಳಿದ್ದಾರೆ.
ರಾಜೇಶ್ ತಮ್ಮ ನಗ್ನ ಫೋಟೋ ಕಳುಹಿಸಿದ ಬಳಿಕ, ಈ ಫೋಟೋಗಳನ್ನು ಜಾಲತಾಣಗಳಲ್ಲಿ ವೈರಲ್ ಮಾಡುತ್ತೇವೆ ಎಂದು ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಅವರು ಹಣ ನೀಡದಿದ್ದಾಗ ನಾವು ಹಿರಿಯ ಪೊಲೀಸ್ ಅಧಿಕಾರಿಗಳೆಂದು ಬೆದರಿಸಿದ್ದಾರೆ. ಈ ಬಗ್ಗೆ ರಾಜೇಶ್ ಸೈಬರ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.