ಕರ್ನಾಟಕ

karnataka

ETV Bharat / state

ಸಾಕ್ಷ್ಯನಾಶಕ್ಕೆ ಯತ್ನಿಸಿ ತಲೆ ಒಡೆದುಕೊಂಡ ಕಳ್ಳನ ಬಂಧನ - ಉಪ್ಪಿನಂಗಡಿ ಕಳ್ಳನ ಬಂಧನ

ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ ಕಲ್ಲೇರಿ ಪೇಟೆಯಲ್ಲಿ ನಡೆದ ಕಳ್ಳತನ ಪ್ರಕರಣ ಸಂಬಂಧ ಕಡಬ ತಾಲೂಕು ಕೌಕ್ರಾಡಿ ಗ್ರಾಮದ ಶಾಂತಿಬೆಟ್ಟು ಮನೆ ನಿವಾಸಿಯೋರ್ವನನ್ನು ಬಂಧಿಸಲಾಗಿದೆ.

ಉಪ್ಪಿನಂಗಡಿ ಕಳ್ಳನ ಬಂಧನ
ಉಪ್ಪಿನಂಗಡಿ ಕಳ್ಳನ ಬಂಧನ

By

Published : Aug 14, 2022, 9:52 PM IST

ಉಪ್ಪಿನಂಗಡಿ: ಇಲ್ಲೋರ್ವ ಕಳ್ಳ ಸಾಕ್ಷ್ಯನಾಶಕ್ಕೆ ಹೋಗಿ ಪೊಲೀಸರ ಕೈಗೆ ತಗಲಾಕಿಕೊಂಡಿದ್ದಾನೆ. ತಲೆಗೆ ಅದ ಗಾಯ ಖಾಕಿ ಬಲೆಗೆ ಬೀಳುವಂತೆ ಮಾಡಿದೆ. ಈ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಪೊಲೀಸ್​​ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ ಕಲ್ಲೇರಿ ಪೇಟೆಯಲ್ಲಿ ಈ ಕಳ್ಳತನ ಕೃತ್ಯ ನಡೆದಿದೆ. ಕಡಬ ತಾಲೂಕು ಕೌಕ್ರಾಡಿ ಗ್ರಾಮದ ಶಾಂತಿಬೆಟ್ಟು ಮನೆ ನಿವಾಸಿ ಅಶ್ರಫ್ (37) ಎಂಬಾತ ಬಂಧಿತ ಆರೋಪಿ. ತಣ್ಣಿರುಪಂತ ಗ್ರಾ.ಪಂನ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಈತ, ಇಲ್ಲಿಂದಲೇ ಕಳ್ಳತನಕ್ಕೆ ಪ್ಲಾನ್ ಮಾಡುತ್ತಿದ್ದ ಎನ್ನಲಾಗಿದೆ.

ಘಟನೆ ವಿವರ: ಆರೋಪಿಯು ಬೆಳ್ತಂಗಡಿಯ ಕಲ್ಲೇರಿ ಗ್ರಾ.ಪಂ. ಕಚೇರಿ ಪಕ್ಕದಲ್ಲಿರುವ ಮೂರ್ತೆದಾರರ ಬ್ಯಾಂಕ್​ನಲ್ಲಿ ಕಳ್ಳತನ ಮಾಡುವ ಉದ್ದೇಶದಿಂದ ಬಂದಿದ್ದ ಎನ್ನಲಾಗಿದೆ. ಆದರೆ, ಇಲ್ಲಿ ಬಾಗಿಲು ಒಡೆಯಲು ಯತ್ನಿಸಿ ವಿಫಲನಾಗಿದ್ದಾನೆ. ನಂತರ ರಾಡ್​ಗೋಸ್ಕರ ಪಿಕಪ್ ವಾಹನವೊಂದರ ಗ್ಲಾಸ್ ಒಡೆದು ಹಾಕಿದ್ದ. ಇದಾದ ಬಳಿಕ ಬ್ಯಾಂಕ್‌ನ ಬಾಗಿಲು ಒಡೆಯುವುದನ್ನು ಬಿಟ್ಟು ಪಕ್ಕದ ಹೋಟೆಲ್‌ಗೆ ನುಗ್ಗಿದ್ದಾನೆ. ಅಲ್ಲಿ ಕ್ಯಾಶ್‌ ಕೌಂಟರ್​​ನಲ್ಲಿದ್ದ ಐದು ಸಾವಿರ ರೂ.ಗೂ ಹೆಚ್ಚಿನ ನಗದನ್ನು ಕದ್ದುಅಲ್ಲಿಂದ ಜಾಗ ಖಾಲಿ ಮಾಡಿದ್ದ.

ಕಳ್ಳತನ ವೇಳೆ ಗಾಯ: ಹೋಟೆಲ್​ನಲ್ಲಿ ನಗದು ಎಗರಿಸಿದ ಬಳಿಕ ಕಳ್ಳ ಪಕ್ಕದ ಕ್ಲಿನಿಕ್‌ನ ಹಿಂಭಾಗದ ಕಿಟಕಿಯ ರಾಡ್‌ ಮುರಿದು ಒಳನುಗ್ಗಿ ಅಲ್ಲಿಯೂ ಹಣಕ್ಕಾಗಿ ಹುಡುಕಾಡಿದ್ದಾನೆ. ಅಲ್ಲಿ ಸುಮಾರು ಐದು ಸಾವಿರ ಕಳ್ಳತನ ಮಾಡಿದ್ದಾನೆ ಎನ್ನಲಾಗಿದೆ. ಆ ವೇಳೆ ಸಿಸಿಟಿವಿ ಅಳವಡಿಸಿರುವ ವಿಚಾರ ಆತನ ಗಮನಕ್ಕೆ ಬಂದಿದೆ. ಗುರುತು ಪತ್ತೆಯಾಗುವ ಭೀತಿಯಿಂದ ಸಾಕ್ಷ್ಯ ನಾಶಕ್ಕೆ ಮುಂದಾಗಿದ್ದಾನೆ. ನಂತರ ಸಿಸಿಟಿವಿಗೆ ಜೋಡಿಸಿದ ವೈರ್‌ ಕಟ್‌ ಮಾಡಿದ್ದಾನೆ. ಆ ವೇಳೆ ಆತನ ತಲೆಯ ಭಾಗಕ್ಕೆ ಹಿಂಭಾಗದ ಬಾಗಿಲು ಜೋರಾಗಿ ಬಡಿದಿದೆ. ಅದರ ಹೊಡೆತಕ್ಕೆ ತೀವ್ರ ಗಾಯವುಂಟಾಗಿ ರಕ್ತ ಸೋರತೊಡಗಿದೆ. ಇದರ ನಡುವೆಯೂ ರಸ್ತೆಯಲ್ಲಿ ಓಡಿಕೊಂಡು ಪರಾರಿಯಾಗಿದ್ದ. ಆದರೆ, ಆತ ಸಂಚರಿಸಿದ ರಸ್ತೆಯಲ್ಲಿ ರಕ್ತದ ಕಲೆಗಳು ಉಂಟಾಗಿತ್ತು.

ಮರುದಿನ ಬೆಳಗ್ಗೆ ಸರಣಿ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಮೆಡಿಕಲ್‌ ಶಾಪ್‌ ಮಾಲೀಕ ಡಾ.ಸಂತೋಷ್‌, ಪಿಕಪ್‌ ವಾಹನವೊಂದರ ಚಾಲಕ ಯಶೋಧರ, ಮೂರ್ತೇದಾರರ ಬ್ಯಾಂಕ್‌ನ ವ್ಯವಸ್ಥಾಪಕರು ಉಪ್ಪಿನಂಗಡಿ ಠಾಣೆಗೆ ದೂರು ನೀಡಿದ್ದರು. ಈ ವೇಳೆ ಮೆಡಿಕಲ್ ಶಾಪ್​​​ನಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಕಳ್ಳನ ಮುಖದ ಗುರುತು ಪತ್ತೆಯಾಗಿತ್ತು. ಆರೋಪಿ ಅಶ್ರಫ್‌ ಸ್ಥಳೀಯರಿಗೆ ಪರಿಚಿತನಾಗಿದ್ದ. ಈತನನ್ನು ಪೊಲೀಸರು ಬೆಳ್ತಂಗಡಿ ಸಮೀಪ ಗುರುವಾಯನಕೆರೆ ಎಂಬಲ್ಲಿ ಬಂಧಿಸಿದ್ದಾರೆ.

ಇದನ್ನೂ ಓದಿ:ರಾಜ್ಯದಲ್ಲಿಂದು 1,837 ಮಂದಿಗೆ ಕೋವಿಡ್ ಸೋಂಕು : ಮೂವರು ಸಾವು

ABOUT THE AUTHOR

...view details