ಕರ್ನಾಟಕ

karnataka

ಡ್ರಗ್ಸ್ ಸಾಗಾಟ ನಡೆಸುತ್ತಿದ್ದ ನಾಲ್ವರ ಬಂಧನ.. 6 ಕೆಜಿ 360 ಗ್ರಾಂ ತೂಕದ ಗಾಂಜಾ ವಶ..

By

Published : Dec 1, 2020, 1:00 PM IST

ಕೇರಳ ಕಡೆಯಿಂದ ಪುತ್ತೂರು ಹಾಗೂ ಸುಳ್ಯ ಮುಂತಾದ ಕಡೆಗಳಲ್ಲಿ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡುವುದಕ್ಕಾಗಿ ಅಕ್ರಮವಾಗಿ ಸಾಗಾಟ ನಡೆಸುತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಈ ದಾಳಿ ನಡೆದಿದೆ..

puttur
ನಾಲ್ವರ ಬಂಧನ

ಪುತ್ತೂರು :ಮಾದಕ ದ್ರವ್ಯ ಸಾಗಾಟ ನಡೆಸುತ್ತಿದ್ದ ಎರಡು ಕಾರುಗಳನ್ನು ವಶ ಪಡಿಸಿಕೊಂಡು ಕೇರಳ ಮೂಲದ ಇಬ್ಬರು ಹಾಗೂ ಪುತ್ತೂರಿನ ಇಬ್ಬರನ್ನು ನ. 30ರಂದು ಪುತ್ತೂರು ನಗರ ಠಾಣೆ ಪೊಲೀಸರು ಮಿಂಚಿನ ಕಾರ್ಯಾಚಾರಣೆ ನಡೆಸಿ ಬಂಧಿಸಿದ್ದಾರೆ.

ಪೈವಳಿಕೆ ಗ್ರಾಮ ಮಂಜೇಶ್ವರ ನಿವಾಸಿ ಮಹಮ್ಮದ್ ಅರ್ಷದ್ (26), ಮಂಗಲ್ಪಾಡಿ ಗ್ರಾಮದ ಉಪ್ಪಳ ನಿವಾಸಿ ರಿಯಾಜ್ (27) ಹಾಗೂ ಪುತ್ತೂರು ತಾಲೂಕು ಕಬಕ ಗ್ರಾಮದ ನಿವಾಸಿ ಅಬ್ದುಲ್ ಖಾದರ್ ಜಾಬೀರ್ (23) ಮತ್ತು ಪುತ್ತೂರು ತಾಲೂಕು ಬನ್ನೂರು ಗ್ರಾಮ ನಿವಾಸಿ ಅಬ್ದುಲ್ ನಜೀರ್ (37) ಬಂಧಿತರು. ಇವರಿಂದ 6 ಕೆಜಿ 360 ಗ್ರಾಂ ತೂಕದ ಗಾಂಜಾ ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

6 ಕೆಜಿ 360 ಗ್ರಾಂ ತೂಕದ ಗಾಂಜಾ ವಶ

ಪುತ್ತೂರಿನ ಕೆಮ್ಮಿಂಜೆ ಗ್ರಾಮದ ನೈತಾಡಿ ಭಗತ್ ಸಿಂಗ್ ರಸ್ತೆಯಲ್ಲಿ ಕೇರಳ ಹಾಗೂ ಕರ್ನಾಟಕ ನೋಂದಣಿಯ ಎರಡು ಕಾರುಗಳಲ್ಲಿ ಮಾದಕ ದ್ರವ್ಯ ಸಾಗಾಟ ನಡೆಸುತ್ತಿದ್ದಾಗ ಪುತ್ತೂರು ನಗರ ಪೊಲೀಸ್ ಠಾಣಾ ಉಪನಿರೀಕ್ಷಕರಾದ ಜಂಬೂರಾಜ್ ಮಹಾಜನ್ ಮತ್ತು ಸಿಬ್ಬಂದಿ ಈ ದಾಳಿ ನಡೆಸಿದರು.

ಕೇರಳ ಕಡೆಯಿಂದ ಪುತ್ತೂರು ಹಾಗೂ ಸುಳ್ಯ ಮುಂತಾದ ಕಡೆಗಳಲ್ಲಿ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡುವುದಕ್ಕಾಗಿ ಅಕ್ರಮವಾಗಿ ಸಾಗಾಟ ನಡೆಸುತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಈ ದಾಳಿ ನಡೆದಿದೆ.

ಬಳ್ಳಾರಿಯಲ್ಲಿ ಮನೆ ಮೇಲ್ಛಾವಣಿ ಕುಸಿದು ದಂಪತಿ ಸಾವು: ಮಗ ಪ್ರಾಣಾಯದಿಂದ ಪಾರು

ಕೆಎಲ್ 14, ಯು 6706 ನೋಂದಣಿಯ ಕಾರು ಹಾಗೂ ಕೆಎ 70, ಎಂ 0287 ಕರ್ನಾಟಕ ನೋಂದಣಿಯ ಕಾರಿನಲ್ಲಿ ಗಾಂಜಾ ಸಾಗಾಟ ನಡೆಸಲಾಗುತ್ತಿತ್ತು. ಆರೋಪಿಗಳಿಂದ ಒಟ್ಟು 1,25,000 ರೂ. ಅಂದಾಜು ಮೌಲ್ಯ 6 ಕೆ.ಜಿ 360 ಗ್ರಾಂ ತೂಕದ ಗಾಂಜಾ, ಒಟ್ಟು 12,000 ರೂ. ಅಂದಾಜು ಮೌಲ್ಯದ 5 ಮೊಬೈಲ್​ಗಳು ಮತ್ತು ಕೃತ್ಯಕ್ಕೆ ಬಳಸಿದ ₹5 ಲಕ್ಷ ಅಂದಾಜು ಮೌಲ್ಯದ 2 ಕಾರು ಹಾಗೂ ಆರೋಪಿಗಳ ಬಳಿಯಿದ್ದ ಮಾರಕಾಯುಧಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಕಲಂ 8©, 20(b)( ii) (B)NDPS Act & 25(1B) Arms Act ನಂತೆ ಪ್ರಕರಣ ದಾಖಲಿಸಲಾಗಿದೆ.

ABOUT THE AUTHOR

...view details