ಮಂಗಳೂರು(ದಕ್ಷಿಣ ಕನ್ನಡ): ಇಲ್ಲಿನ ವಿಮಾನ ನಿಲ್ದಾಣದಲ್ಲಿ ವಿವಿಧ ರೀತಿಯಲ್ಲಿ ಚಿನ್ನ ಸಾಗಾಟ ಮಾಡುತ್ತಿದ್ದವರನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಸೆಪ್ಟೆಂಬರ್ 6 ರಿಂದ 10 ವರೆಗೆ ವಿಮಾನ ನಿಲ್ದಾಣದಲ್ಲಿ 5 ಪ್ರಕರಣಗಳು ಬೆಳಕಿಗೆ ಬಂದಿವೆ. ಜೀನ್ಸ್ ಪ್ಯಾಂಟ್, ಒಳಉಡುಪು, ಬನಿಯನ್, ಶೂಗಳು ಮತ್ತು ಗುದನಾಳದಲ್ಲಿಯೂ ಚಿನ್ನವನ್ನು ಬಚ್ಚಿಟ್ಟು ಸಾಗಾಟ ಮಾಡಲಾಗುತ್ತಿತ್ತು. ಚಿನ್ನವನ್ನು ಪೇಸ್ಟ್ ಮತ್ತು ಪೌಡರ್ ರೂಪದಲ್ಲಿ ವಶಪಡಿಸಿಕೊಳ್ಳಲಾಗಿದೆ.
ಜೀನ್ಸ್ ಪ್ಯಾಂಟ್, ಒಳ ಉಡುಪು, ಶೂ, ಗುದನಾಳದಲ್ಲಿ ಬಚ್ಚಿಟ್ಟು ಚಿನ್ನ ಸಾಗಾಟ ಪತ್ತೆ - ಈಟಿವಿ ಭಾರತ್ ಕನ್ನಡ
ಮಂಗಳೂರು ವಿಮಾನ ನಿಲ್ದಾಣದಲ್ಲಿ ಐವರು ಪ್ರಯಾಣಿಕರಿಂದ ಅಂದಾಜು 44 ಲಕ್ಷ ರೂಪಾಯಿ ಮೌಲ್ಯದ ಅಕ್ರಮ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
![ಜೀನ್ಸ್ ಪ್ಯಾಂಟ್, ಒಳ ಉಡುಪು, ಶೂ, ಗುದನಾಳದಲ್ಲಿ ಬಚ್ಚಿಟ್ಟು ಚಿನ್ನ ಸಾಗಾಟ ಪತ್ತೆ Arrest of five people carrying illegal gold in magalore airport](https://etvbharatimages.akamaized.net/etvbharat/prod-images/768-512-16339837-thumbnail-3x2-bng.jpeg)
ಜೀನ್ಸ್ ಪ್ಯಾಂಟ್, ಒಳ ಉಡುಪು, ಶೂ, ಗುದನಾಳದಲ್ಲಿ ಬಚ್ಚಿಟ್ಟು ಅಕ್ರಮ ಚಿನ್ನ ಸಾಗಾಟ
ಒಟ್ಟು 24 ಕ್ಯಾರೆಟ್ ಶುದ್ಧತೆಯ 869 ಗ್ರಾಂ ಚಿನ್ನ ಜಪ್ತಿ ಮಾಡಲಾಗಿದೆ. ಇದರ ಮೌಲ್ಯ 44,33,780 ರೂ ಎಂದು ಅಂದಾಜಿಸಲಾಗಿದೆ. ದುಬೈನಿಂದ ಮಂಗಳೂರಿಗೆ ಆಗಮಿಸಿದ ವಿಮಾನಗಳಲ್ಲಿ ಅಕ್ರಮ ಸಾಗಾಟ ಮಾಡಲಾಗುತ್ತಿತ್ತು. ಓರ್ವ ಮಹಿಳೆ ಮತ್ತು ನಾಲ್ವರು ಪುರುಷ ಪ್ರಯಾಣಿಕರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಇದನ್ನೂ ಓದಿ :ಗೇಮಿಂಗ್ ಆ್ಯಪ್ ಹಗರಣ: ಕೋಲ್ಕತ್ತಾ ಉದ್ಯಮಿ ಮನೆಯಲ್ಲಿ ಇಡಿಗೆ ಸಿಕ್ತು 17 ಕೋಟಿ ರೂಪಾಯಿ!