ಮಂಗಳೂರು :ಕ್ಷುಲ್ಲಕ ಕಾರಣಕ್ಕೆ ಲಾಡ್ಜ್ನಲ್ಲಿ ಸ್ನೇಹಿತನನ್ನೇ ಹತ್ಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಇನ್ನೋರ್ವ ಆರೋಪಿ ತಲೆ ಮರೆಸಿಕೊಂಡಿದ್ದಾನೆ. ಮಂಗಳೂರು ನಗರ ನಿವಾಸಿಗಳಾದ ಜಾಯ್ಸನ್, ಪ್ರಮೀತ್, ಕಾರ್ತಿಕ್, ಪ್ರಜ್ವಲ್, ದುರ್ಗೇಶ್ ಬಂಧಿತ ಆರೋಪಿಗಳಾಗಿದ್ದಾರೆ.
ಮೃತ ಧನುಷ್ ಸೇರಿದಂತೆ ಆರೋಪಿಗಳೆಲ್ಲರೂ ಸ್ನೇಹಿತರಾಗಿದ್ದರು. ಧನುಷ್ಗೆ ಮಹಿಳೆಯರ, ತಾಯಿ, ತಂಗಿ, ಅಕ್ಕಂದಿರ ಪದ ಬಳಕೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸುವ ಕೆಟ್ಟ ಚಾಳಿ ಇತ್ತು. ಆದ್ದರಿಂದ ಈ ಬಗ್ಗೆ ಆತನಿಗೆ ತಿಳಿ ಹೇಳಬೇಕೆಂದು ಈ ಸ್ನೇಹಿತರೆಲ್ಲ ಸೇರಿ ಪಾರ್ಟಿ ಆಯೋಜಿಸಿದ್ದರು. ಈ ಹಿನ್ನೆಲೆಯಲ್ಲಿ ದಸರಾ ದಿನ(ಅ.15)ಮಂಗಳೂರಿನ ಪಂಪ್ ವೆಲ್ ಬಳಿಯ ಸಾಯಿ ಪ್ಯಾಲೇಸ್ ಲಾಡ್ಜ್ ನಲ್ಲಿ ರೂಂ ಮಾಡಿ ಪಾರ್ಟಿ ಆಯೋಜಿಸಿದ್ದಾರೆ.
ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ಮಾತನಾಡಿ, ಪಾರ್ಟಿಯಲ್ಲಿ ಈ ಬಗ್ಗೆ ಧನುಷ್ ಗೆ ತಿಳಿಸಿದ್ದಾರೆ. ಆದರೂ ಆತ ಉಡಾಫೆಯಿಂದ ವರ್ತಿಸುತ್ತಾನೆ. ಈ ಸಂದರ್ಭ ವಾಗ್ವಾದ ಬೆಳೆದು ಒಬ್ಬರಿಗೊಬ್ಬರಿಗೂ ಹೊಡೆದಾಟ ನಡೆಯುತ್ತದೆ.