ಕರ್ನಾಟಕ

karnataka

ETV Bharat / state

ಟೋಲ್ ​ಗೇಟ್​​​ನಲ್ಲಿ ಪಿಸ್ತೂಲ್​​​ ತೋರಿಸಿ ಬೆದರಿಕೆ ಹಾಕಿದ್ದ ಆರೋಪಿ ಅಂದರ್​​

ಟೋಲ್​ಗೇಟ್​ನಲ್ಲಿ ಟೋಲ್ ಕೇಳಿದ ಸಿಬ್ಬಂದಿಗೆ ಪಿಸ್ತೂಲ್ ತೋರಿಸಿ ಜೀವ ಬೆದರಿಕೆ ಒಡ್ಡಿದ್ದ ರಫೀಕ್ ಕೆಎನ್​​ಪಿ (36) ಎಂಬ ಆರೋಪಿಯನ್ನು ಬಂಧಿಸುವಲ್ಲಿ ಸುರತ್ಕಲ್ ಪೊಲೀಸರು ಯಶಸ್ವಿಯಾಗಿದ್ದಾರೆ.

Arrest of accused who threatening to show pistol
ಪಿಸ್ತೂಲ್ ತೋರಿಸಿ ಬೆದರಿಕೆ ಒಡ್ಡಿದ್ದ ಆರೋಪಿ ಅಂದರ್​

By

Published : Nov 28, 2019, 11:08 PM IST

ಮಂಗಳೂರು:ಟೋಲ್​ಗೇಟ್​ನಲ್ಲಿ ಟೋಲ್ ಕೇಳಿದ ಸಿಬ್ಬಂದಿಗೆ ಪಿಸ್ತೂಲ್ ತೋರಿಸಿ ಜೀವ ಬೆದರಿಕೆ ಒಡ್ಡಿದ್ದ ಆರೋಪಿಯನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.

ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ರಫೀಕ್ ಕೆಎನ್​​ಪಿ (36) ಬಂಧಿತ ಆರೋಪಿ. ನ. 28ರಂದು ಮಧ್ಯಾಹ್ನ ಸುರತ್ಕಲ್ ಎನ್.ಐ.ಟಿ.ಕೆ ಟೋಲ್ ಗೇಟ್​ನಲ್ಲಿ ಈ ಘಟನೆ ನಡೆದಿತ್ತು. ಸುರತ್ಕಲ್ ಕಡೆಯಿಂದ ಉಡುಪಿ ಕಡೆಗೆ ಕಾರಿನಲ್ಲಿ ಹೋಗುತ್ತಿದ್ದ ರಫೀಕ್ ಟೋಲ್ ಪಾವತಿಸಲು ನಿರಾಕರಿಸಿದ್ದನಂತೆ. ಈ ಸಂದರ್ಭದಲ್ಲಿ ಯಜ್ಞೇಶ್ ಎಂಬ ಟೋಲ್ ಸಿಬ್ಬಂದಿ ಹಣ ಪಾವತಿಸಲು ಸೂಚಿಸಿದಾಗ ರಫೀಕ್ ಕಾರಿನಲ್ಲಿದ್ದ ಪಿಸ್ತೂಲ್ ತೋರಿಸಿ ಕೊಂದು ಬಿಡುವುದಾಗಿ ಬದೆರಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಈ ಬಗ್ಗೆ ಪ್ರಕರಣ ದಾಖಲಿಸಿದ್ದ ಸುರತ್ಕಲ್ ಪೊಲೀಸರು ಆರೋಪಿಯನ್ನು ಬಂಧಿಸಿ ಕಾರು ಮತ್ತು ಪಿಸ್ತೂಲ್ ವಶಪಡಿಸಿಕೊಂಡಿದ್ದಾರೆ.

ABOUT THE AUTHOR

...view details