ಉಳ್ಳಾಲ: ಬಗಂಬಿಲ ರಸ್ತೆಯಲ್ಲಿ ಯುವತಿಯ ಸರ ಕಳವು ಮಾಡಿದ್ದ ಆರೋಪಿಯನ್ನು ಮೂರೇ ಗಂಟೆಗಳಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಉಳ್ಳಾಲದಲ್ಲಿ ಮಹಿಳೆಯ ಸರ ಎಗರಿಸಿದ್ದ ಕಳ್ಳನ ಬಂಧನ - Ullala Police Station
ಬೈಕ್ನಲ್ಲಿ ಬಂದು ಮಹಿಳೆಯ ಸರಗಳ್ಳತನ ಮಾಡಿದ್ದ ಆರೋಪಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಉಳ್ಳಾಲದಲ್ಲಿ ಮಹಿಳೆಯ ಸರ ಎಗರಿಸಿದ್ದ ಕಳ್ಳನ ಬಂಧನ
ಕೇರಳ ಮೂಲದ ಸುಲ್ತಾನ್ (28) ಬಂಧಿತ. ದೇರಳಕಟ್ಟೆಯಲ್ಲಿರುವ ಹೋಟೆಲ್ನಲ್ಲಿ ಕೆಲಸಕ್ಕಿದ್ದ ಈತ ಕಳವು ಕೃತ್ಯದಲ್ಲಿ ಭಾಗಿಯಾಗಿದ್ದಾನೆ. ನಿನ್ನೆ ಸಂಜೆ ಕೆಲಸ ಮುಗಿಸಿ ಮನೆ ಕಡೆಗೆ ತೆರಳುತ್ತಿದ್ದ ನಿಶಾ ಎಂಬವರ ಕುತ್ತಿಗೆಯಿಂದ ಒಂದು ತೊಲ ಬೆಲೆಬಾಳುವ ಚಿನ್ನದ ಸರವನ್ನು ಬುಲೆಟ್ ಬೈಕಿನಲ್ಲಿ ಬಂದು ಈತ ಎಗರಿಸಿದ್ದ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ತಕ್ಷಣ ಕಾರ್ಯಪ್ರವೃತ್ತರಾದ ಉಳ್ಳಾಲ ಪೊಲೀಸರು ಅಲ್ಲಲ್ಲಿ ಬಂದೋಬಸ್ತ್ ನಡೆಸಿ ತಪಾಸಣೆ ಆರಂಭಿಸಿದ್ದರು. ಕೊಣಾಜೆ ಠಾಣಾ ಕ್ರೈಂ ತಂಡದ ಸಹಕಾರ ಪಡೆದು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.