ಕರ್ನಾಟಕ

karnataka

ETV Bharat / state

ಮಂಗಳೂರಿನ ಇಂದಿರಾ ಕಾಲೇಜ್ ಆಫ್ ನರ್ಸಿಂಗ್​ನಲ್ಲಿ ರ‍್ಯಾಗಿಂಗ್​: 6 ವಿದ್ಯಾರ್ಥಿಗಳ ಬಂಧನ - mangalore latest news

ಇಂದಿರಾ ಕಾಲೇಜಿನಲ್ಲಿ 2 ನೇ ವರ್ಷದ ಬಿಎಸ್​ಸಿ ಎಮ್ ಐ ಟಿ ವಿದ್ಯಾಭ್ಯಾಸ ಮಾಡುತ್ತಿರುವ ಮ್ಯಾನುಯಲ್ ಬಾಬು ಎಂಬ ವಿದ್ಯಾರ್ಥಿಗೆ  6 ಮಂದಿ  ಹಿರಿಯ ವಿದ್ಯಾರ್ಥಿಗಳು ರ‍್ಯಾಗಿಂಗ್ ನಡೆಸಿದ್ದಾರೆ. ಈ ಸಂಬಂಧ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಈ ಆರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.

Arrest of 6 students for ragging in college at mangalore
ಆರು ವಿದ್ಯಾರ್ಥಿಗಳ ಬಂಧನ

By

Published : Jul 16, 2021, 5:49 PM IST

ಮಂಗಳೂರು: ಮಂಗಳೂರಿನ ಫಳ್ನೀರ್‌ನಲ್ಲಿರುವ ಇಂದಿರಾ ಕಾಲೇಜ್ ಆಫ್ ನರ್ಸಿಂಗ್‌ನ ವಿದ್ಯಾರ್ಥಿಗೆ ಹಿರಿಯ ವಿದ್ಯಾರ್ಥಿಗಳು ರ‍್ಯಾಗಿಂಗ್ ಮಾಡುತ್ತಿರುವ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಈ ಸಂಬಂಧ ಆರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಇಂದಿರಾ ಕಾಲೇಜಿನಲ್ಲಿ 2 ನೇ ವರ್ಷದ ಬಿಎಸ್​ಸಿ ಎಮ್ ಐ ಟಿ ವಿದ್ಯಾಭ್ಯಾಸ ಮಾಡುತ್ತಿರುವ ಮ್ಯಾನುಯಲ್ ಬಾಬು ಎಂಬ ವಿದ್ಯಾರ್ಥಿಗೆ 6 ಮಂದಿ ಹಿರಿಯ ವಿದ್ಯಾರ್ಥಿಗಳು ರ‍್ಯಾಗಿಂಗ್ ನಡೆಸಿದ್ದಾರೆ. ಶ್ರೀಲಾಲ್ (20), ಸಾಹಿದ್ (20), ಅಮ್ಜದ್ (20), ಜುರೈಜ್ (20), ಹುಸೈನ್ (20) ಮತ್ತು ಲಿಮ್ಸ್ (20) ಬಂಧಿತ ವಿದ್ಯಾರ್ಥಿಗಳು.

ಜುಲೈ 14 ರಂದು ವಿದ್ಯಾರ್ಥಿ ಮಂಗಳೂರಿನ ಫಳ್ನೀರ್​ನಲ್ಲಿರುವ ಹೋಟೆಲ್‌ವೊಂದಕ್ಕೆ ಊಟ ಮಾಡಲು ತೆರಳಿದ ವೇಳೆ ಗೆಳೆಯರೊಂದಿಗೆ ಬಂದಿದ್ದ ಶ್ರೀಲಾಲ್ ಬೆದರಿಸಿದ್ದ. ನೀನು ಜೂನಿಯರ್, ನಾನು ಸೀನಿಯರ್. ನಾನು ಬರುವಾಗ ಎದ್ದು ನಿಂತು ರೆಸ್ಪೆಕ್ಟ್ ಕೊಡಬೇಕು ಎಂದು ಹೇಳಿದ್ದಾನೆ. ಇಷ್ಟೇ ಅಲ್ಲದೆ ಈತ ತನ್ನ ಸ್ನೇಹಿತರ ಜೊತೆಗೂಡಿ ಪದೇ ಪದೇ ವಿದ್ಯಾರ್ಥಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ್ದಾನೆ.

ಹಲ್ಲೆಗೊಳಗಾದ ವಿದ್ಯಾರ್ಥಿ ವೆನ್ಲಾಕ್ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದು ಮನೆಯವರಿಗೆ ವಿಷಯ ತಿಳಿಸಿದ್ದಾನೆ. ಮನೆಯವರ ಸೂಚನೆಯಂತೆ ದೂರು ನೀಡಿದ್ದು, ರ‍್ಯಾಗಿಂಗ್​ ಮಾಡಿದ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ABOUT THE AUTHOR

...view details