ಮಂಗಳೂರು(ದಕ್ಷಿಣ ಕನ್ನಡ):ಸಿಬಿಎಸ್ಇ ಬೋರ್ಡ್ ಹಾಗೂ ಬೆಳಗಾವಿಯ ಬಿ.ಬಿ ಹಂಜಿ ಇಂಟರ್ ನ್ಯಾಷನಲ್ ಸ್ಕೂಲ್ ಆಯೋಜಿಸಿದ ಸೌತ್ ಝೋನ್ ಸ್ಕೇಟಿಂಗ್ ಚಾಂಪಿಯನ್ ಶಿಪ್ನಲ್ಲಿ ಮಂಗಳೂರಿನ ಆರ್ನಾ ರಾಜೇಶ್ 2 ಚಿನ್ನದ ಪದಕ ಪಡೆದು ಸಾಧನೆ ಮಾಡಿದ್ದಾರೆ.
ಬೆಳಗಾವಿಯ ಶಿವಗಂಗಾ ಸ್ಕೇಟಿಂಗ್ ರಿಂಕ್ನಲ್ಲಿ ನಡೆದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಈ ವಿದ್ಯಾರ್ಥಿನಿ ಆಯ್ಕೆಯಾಗಿದ್ದಾರೆ. ಮಂಗಳೂರಿನ ಬಿಜೈ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್ 2 ನೇ ತರಗತಿಯ ವಿದ್ಯಾರ್ಥಿನಿ ಆರ್ನಾ ರಾಜೇಶ್ 500 ಮೀಟರ್ ಹಾಗೂ 1000 ಮೀಟರ್ ರಿಂಕ್ ರೇಸ್ ನಲ್ಲಿ ತಲಾ 2 ಚಿನ್ನದ ಪದಕ ಪಡೆದಿದ್ದಾರೆ.