ಕರ್ನಾಟಕ

karnataka

ETV Bharat / state

ಪೊಳಲಿ ಕ್ಷೇತ್ರಕ್ಕೆ ಭೇಟಿ ನೀಡಿದ ನಟ ಅರ್ಜುನ್ ಸರ್ಜಾ: ವಾಸ್ತುಶಿಲ್ಪಕ್ಕೆ ಫಿದಾ - ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ

ನಟ ಅರ್ಜುನ್ ಸರ್ಜಾ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿ ದೇವಾಲಯದ ವಾಸ್ತುಶಿಲ್ಪ ವೀಕ್ಷಣೆ ಮಾಡಿದರು.

ನಟ ಅರ್ಜುನ್ ಸರ್ಜಾರಿಂದ ಪೊಳಲಿ ಕ್ಷೇತ್ರದ ವಾಸ್ತುಶಿಲ್ಪ ವೀಕ್ಷಣೆ: ಶ್ಲಾಘನೆ

By

Published : Oct 25, 2019, 11:20 PM IST

ಮಂಗಳೂರು: ನಟ ಅರ್ಜುನ್ ಸರ್ಜಾ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿದರು. ಇದೇ ವೇಳೆ, ದೇವಾಲಯದ ವಾಸ್ತುಶಿಲ್ಪ ವನ್ನು ವೀಕ್ಷಣೆ ಮಾಡಿದರು.

ನಟ ಅರ್ಜುನ್ ಸರ್ಜಾರಿಂದ ಪೊಳಲಿ ಕ್ಷೇತ್ರದ ವಾಸ್ತುಶಿಲ್ಪ ವೀಕ್ಷಣೆ: ಶ್ಲಾಘನೆ

ಅರ್ಜುನ್ ಸರ್ಜಾ ಚೆನ್ನೈನ ಗೇರುಗಂಬಾಕ್ಕನಲ್ಲಿ ಬೃಹತ್ ಗಾತ್ರದ ಹನುಮಾನ್ ದೇವಾಲಯವನ್ನು ನಿರ್ಮಿಸುತ್ತಿದ್ದಾರೆ. ಈ ದೇವಾಲಯದ ವಾಸ್ತುಶಿಲ್ಪದ ಕಾಮಗಾರಿಗೆ ಮಂಗಳೂರಿನ ವಾಸ್ತುಶಿಲ್ಪಿ ಸಂತೋಷ್ ಶೆಟ್ಟಿ ಬೋಳಾರ್ ಅವರನ್ನು ನೇಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅರ್ಜುನ್ ಸರ್ಜಾ ವಾಸ್ತುಶಿಲ್ಪಿ ಸಂತೋಷ್ ಶೆಟ್ಟಿ ಯವರೊಂದಿಗೆ ಪೊಳಲಿ ಕ್ಷೇತ್ರದ ಮರದ ಕೆತ್ತನೆ ಹಾಗೂ ವಾಸ್ತುಶಿಲ್ಪ ವನ್ನು‌ ವೀಕ್ಷಿಸಿದರು.

ಈ ಸಂದರ್ಭ ದೇವಳದ ವಾಸ್ತುಶಿಲ್ಪಕ್ಕೆ ಬೆರಗಾದ ಅರ್ಜುನ್ ಸರ್ಜಾ ತಮ್ಮ ದೇವಾಲಯದಲ್ಲೂ ಇಂತಹದ್ದೇ ವಾಸ್ತುಶಿಲ್ಪ, ಕೆತ್ತನೆಗಳನ್ನು ಬಳಸುವುದಾಗಿ ಹೇಳಿದರು.

ABOUT THE AUTHOR

...view details