ಮಂಗಳೂರು:ತೋಟಕ್ಕೆ ನುಗ್ಗಿ ಅಡಿಕೆ ಕಳವು ಮಾಡಿದ ಮೂವರು ಆರೋಪಿಗಳನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರಿನಲ್ಲಿ ಅಡಿಕೆ ಕಳವು: ಮೂವರು ಆರೋಪಿಗಳ ಬಂಧನ - areka theft manglore news
ತೋಟಕ್ಕೆ ನುಗ್ಗಿ ಅಡಿಕೆ ಕಳವು ಮಾಡಿದ ಮೂವರು ಆರೋಪಿಗಳನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು
ಉಪ್ಪಿನಂಗಡಿ ನಳಿಕೆ ಮಜಲು ನಿವಾಸಿ ಚಂದ್ರಹಾಸ (23), ಉಪ್ಪಿನಂಗಡಿ ಕಜೆಕ್ಕಾರು ನಿವಾಸಿ ಜಗದೀಶ್ (24), ಉಪ್ಪಿನಂಗಡಿ ಪೆರಿಯಡ್ಕ ನಿವಾಸಿ ಯೋಗೀಶ್ (18 ) ಬಂಧಿತರಾಗಿದ್ದಾರೆ.
ಜ. 31 ರಂದು ಪುತ್ತೂರು ತಾಲೂಕಿನ ಕಸಬಾ ಗ್ರಾಮದ ನೆಕ್ಕರೆ ಎಂಬಲ್ಲಿನ ರಾಜೇಶ್ ಎಂಬುವರ ತೋಟದಿಂದ ಹಣ್ಣು ಅಡಿಕೆಗಳನ್ನು ಕಳುವು ಮಾಡಿದ್ದರು. ಆರೋಪಿಗಳಿಂದ 25 ಸಾವಿರ ರೂ ಮೌಲ್ಯದ ಅಡಿಕೆ, ಎರಡು ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.