ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚಿಗುರು ಅಡಿಕೆ ಹೆಚ್ಚಾಗಿ ಉದುರುತ್ತಿರುವುದು ಹಾಗೂ ಸಿಂಗಾರ ಒಣಗುವ ಸಮಸ್ಯೆ ವಿಪರೀತವಾಗಿ ಕಂಡುಬಂದ ಹಿನ್ನೆಲೆ ಅಡಿಕೆ ತೋಟಗಳಿಗೆ ಸಿಪಿಸಿಐಆರ್ ವಿಜ್ಞಾನಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ವಿಟ್ಲದ ಸಿಪಿಸಿಆರ್ಐ ವಿಜ್ಞಾನಿಗಳ ಗಮನಕ್ಕೆ ತಂದು, ಈ ಕುರಿತು ಸೂಕ್ತ ಅಧ್ಯಯನ ಹಾಗೂ ಪರಿಹಾರದ ಮಾರ್ಗ ಅಗತ್ಯವಾಗಿದೆ ಎಂದು ಅಡಿಕೆ ಬೆಳೆಗಾರರ ಪರವಾಗಿ ತಿಳಿಸಿದ್ದರು.