ಮಂಗಳೂರು: ನಗರದ ಗರೋಡಿ ಎಂಬಲ್ಲಿ ಆಟೋರಿಕ್ಷಾದಲ್ಲಿ ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ಡಿಜಿಪಿ ಪ್ರವೀಣ್ ಸೂದ್ ಘಟನಾ ಸ್ಥಳಕ್ಕೆ ಇಂದು ಭೇಟಿ ನೀಡಿ, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ನವೆಂಬರ್ 19 ರಂದು ಪಡೀಲ್ ಕಡೆಯಿಂದ ಪಂಪ್ವೆಲ್ಗೆ ಬರುತ್ತಿದ್ದ ಆಟೋರಿಕ್ಷಾದಲ್ಲಿ ಆರೋಪಿ ಶಾರೀಕ್ ಕೊಂಡೊಯ್ಯುತ್ತಿದ್ದ ಕುಕ್ಕರ್ ಬಾಂಬ್ ಸ್ಫೋಟಗೊಂಡಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ ಗೃಹ ಸಚಿವರು ಮತ್ತು ಡಿಜಿಪಿ ಭೇಟಿ ನೀಡಿ, ಹಾನಿಗೊಳಗಾದ ರಿಕ್ಷಾವನ್ನು ವೀಕ್ಷಿಸಿದರು. ಈ ವೇಳೆ ಮಂಗಳೂರು ಕಮಿಷನರ್ ಶಶಿಕುಮಾರ್, ಜಿಲ್ಲಾಧಿಕಾರಿ ರವಿಕುಮಾರ್ ಎಂ ಆರ್, ಶಾಸಕ ಭರತ್ ಶೆಟ್ಟಿ ಜೊತೆಗಿದ್ದರು.