ಕರ್ನಾಟಕ

karnataka

ETV Bharat / state

ವಿದೇಶದಿಂದ ಬಂದು ಕ್ವಾರಂಟೈನ್​ ಆಗುವವರ ಮೇಲೆ ನಿಗಾ ಇಡಲು ಅಧಿಕಾರಿಗಳ ನೇಮಕ - Dakshina Kannada DC

ವಿದೇಶದಿಂದ ಬಂದು ಕ್ವಾರಂಟೈನ್​ ಆಗಲಿರುವ ಜನರ ವಿಚಾರಣೆಗಾಗಿ ಅಧಿಕಾರಿಗಳನ್ನು ನೇಮಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಹೊರ ದೇಶದಿಂದ ಬರುವ ಎಲ್ಲಾ ಭಾರತೀಯರನ್ನು ಆರೋಗ್ಯ ಪರೀಕ್ಷೆಗೆ ಒಳಪಡಿಸುವ ಬಗ್ಗೆ ಖಾತರಿ ಪಡಿಸುವುದು ಸೇರಿದಂತೆ ಕ್ವಾರಂಟೈನ್​ ಆದವರ ಮೇಲೆ ತೀವ್ರ ನಿಗಾ ವಹಿಸುವುದು ಈ ಅಧಿಕಾರಿಗಳ ಕಾರ್ಯವಾಗಿರಲಿದೆ.

Appointment of officers to keep track of those who have come from abroad
ವಿದೇಶದಿಂದ ಬಂದು ಕ್ವಾರಂಟೈನ್​ ಆದವರ ಮೇಲೆ ನಿಗಾ ಇಡಲು ಅಧಿಕಾರಿಗಳ ನೇಮಕ

By

Published : May 11, 2020, 10:51 PM IST

ಮಂಗಳೂರು (ದಕ್ಷಿಣ ಕನ್ನಡ): ವಿದೇಶದಿಂದ ಆಗಮಿಸುವ ಭಾರತೀಯರಿಗೆ ಕ್ವಾರಂಟೈನ್ ಸೌಲಭ್ಯ ವ್ಯವಸ್ಥೆ ಮಾಡಲು ವಿವಿಧ ಅಧಿಕಾರಿಗಳನ್ನು ನೇಮಕ ಮಾಡಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ವಿಮಾನ ನಿಲ್ದಾಣ ಹಾಗೂ ಬಂದರು ಮೂಲಕ ಆಗಮಿಸುವ ಪ್ರಯಾಣಿಕರಿಗಾಗಿ ಎರಡು ತಂಡಗಳಲ್ಲಿ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಈ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳು ನಿಯೋಜನೆ ಮಾಡುತ್ತಾರೆ.

ವಿಮಾನ ನಿಲ್ದಾಣ ಹಾಗೂ ಬಂದರು ಪ್ರದೇಶಗಳಲ್ಲಿ ಸರ್ಕಾರ ನೀಡಿರುವ ಪ್ರಮಾಣಿತ ಕಾರ್ಯಾಚರಣೆ ವಿಧಾನದಂತೆ ಮುಂಜಾಗ್ರತಾ ಕ್ರಮಗಳನ್ನು ನಿರ್ವಹಿಸುವುದು. ಹೊರ ದೇಶದಿಂದ ಬರುವ ಎಲ್ಲಾ ಭಾರತೀಯರನ್ನು ಆರೋಗ್ಯ ಪರೀಕ್ಷೆಗೆ ಒಳಪಡಿಸುವ ಬಗ್ಗೆ ಖಾತರಿ ಪಡಿಸುವುದು ಇವರ ಕೆಲಸವಾಗಿರಲಿದೆ.

ಅಲ್ಲದೆ ವಿಮಾನ ನಿಲ್ದಾಣ ಹಾಗೂ ಬಂದರು ಪ್ರದೇಶಗಳಿಗೆ ಬೇಕಾಗಿರುವ ವಾಹನಗಳು, ವೈದ್ಯಾಧಿಕಾರಿಗಳೊಂದಿಗೆ ಸಂಪರ್ಕ ಹೊಂದಿರುವುದು, ವಿಮಾನ ನಿಲ್ದಾಣ ಹಾಗೂ ಬಂದರು ಪ್ರದೇಶದಿಂದ ಕ್ವಾರಂಟೈನ್ ಕೇಂದ್ರದವರೆಗೆ ವಾಹನಗಳ ನಿಯೋಜನೆ ಮಾಡುವುದು, ಅಲ್ಲದೆ ಮೂರನೇ ತಂಡದ ಅಧಿಕಾರಿಗಳು ನಿಗದಿಪಡಿಸಿರುವ ಹೋಟೆಲ್​​ಗಳ ಸಂಪೂರ್ಣ ಮಾಹಿತಿ ಹಾಗೂ ಪ್ರಯಾಣಿಕರ ಮಾಹಿತಿಗಳನ್ನು ಈ ಅಧಿಕಾರಿಗಳು ಹೊಂದಿರಬೇಕು. ಕ್ವಾರಂಟೈನ್​ಗೆ ಒಳಗಾಗಿರುವವರಿಗೆ ಊಟದ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಯಾರಾದರು ಅಧಿಕಾರಿಗಳು ತಮಗೆ ನಿಯೋಜಿಸಿರುವ ಕಾರ್ಯದಲ್ಲಿ ತಪ್ಪಿದ್ದಲ್ಲಿ ಅಂತವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ‌.

ABOUT THE AUTHOR

...view details