ಕರ್ನಾಟಕ

karnataka

ETV Bharat / state

ಕುಕ್ಕೆ: ಬ್ರಹ್ಮರಥ ಏರಲು-ದೇಗುಲದ ಗರ್ಭಗುಡಿ ಪ್ರವೇಶ ಮಾಡಲು ಅವಕಾಶ ನೀಡದಂತೆ ಮನವಿ - Kukke Subrahmanya Hitarakshana Vedike

ಬ್ರಹ್ಮರಥದಲ್ಲಿ ಕೂರಲು ಮತ್ತು ರಥ ಹತ್ತಲು ಪೀಠಾಧಿಪತಿಗಳಿಗೆ ಅವಕಾಶ ನೀಡಬಾರದೆಂದು ಆಗ್ರಹಿಸಿ ಕುಕ್ಕೆ ಸುಬ್ರಹ್ಮಣ್ಯ ಹಿತರಕ್ಷಣಾ ವೇದಿಕೆ ಮನವಿ ಮಾಡಿದೆ. ದೇಗುಲದ ಆಡಳಿತಾಧಿಕಾರಿ ಹಾಗೂ ಕಾರ್ಯ ನಿರ್ವಾಹಣಾಧಿಕಾರಿಗಳಿಗೆ ಮನವಿ ಮಾಡಲಾಗಿದ್ದು, ಈ ತರಹದ ಸಂಪ್ರದಾಯಕ್ಕೆ ಆಸ್ಪದ ಕೊಡಬಾದೆಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

Appeal from Kukke Subrahmanya Hitarakshana Vedike
ವೇದಿಕೆಯ ವತಿಯಿಂದ ಮನವಿ

By

Published : Dec 17, 2020, 10:04 PM IST

ಸುಬ್ರಹ್ಮಣ್ಯ:ಸಂಪುಟ ನರಸಿಂಹಸ್ವಾಮಿ ಮಠದ ಪೀಠಾಥಿಪತಿಗಳಿಗೆ ಶೈವ ಸಂಪ್ರದಾಯದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಗರ್ಭಗುಡಿ ಪ್ರವೇಶ ಹಾಗೂ ಚಂಪಾಷಷ್ಠಿ ಸಂದರ್ಭದಲ್ಲಿ ಬ್ರಹ್ಮರಥ ಹತ್ತಿ ಬ್ರಹ್ಮ ರಥೋತ್ಸವದಲ್ಲಿ ಬ್ರಹ್ಮರಥದಲ್ಲಿ ಕೂರಲು ಮತ್ತು ರಥ ಹತ್ತಲು ಅವಕಾಶ ನೀಡಬಾರದೆಂದು ಆಗ್ರಹಿಸಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಅಧಿಕಾರಿ ಮತ್ತು ಕಾರ್ಯ ನಿರ್ವಾಹಣಾಧಿಕಾರಿಗಳಿಗೆ ಕುಕ್ಕೆ ಸುಬ್ರಹ್ಮಣ್ಯ ಹಿತರಕ್ಷಣಾ ವೇದಿಕೆಯ ವತಿಯಿಂದ ಮನವಿ ನೀಡಲಾಗಿದೆ.

ಮನವಿ ಪ್ರತಿ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ಧರ್ಮದಾಯ ದತ್ತಿಗಳ ಅಧಿನಿಯಮ ಮೂಲಕ ನಡೆಸಲ್ಪಡುವ ಸರ್ಕಾರಿ ಶೈವ ಸಂಪ್ರದಾಯದ ದೇವಸ್ಥಾನವಾಗಿದ್ದು, ಇದರಲ್ಲಿ ದೀರ್ಘ ಕಾಲ ಟ್ರಸ್ಟಿಯಾಗಿ ನೇಮಕವಾಗಿರುವ ಸಂಪುಟ ನರಸಿಂಹಸ್ವಾಮಿ ಮಠದ ಪೀಠಾಧಿಪತಿ ಮತ್ತು ಇನ್ನಿತರ ಯಾರಿಗೂ ಅನುವಂಶಿಕ ಹಕ್ಕು ಇರುವುದಿಲ್ಲ ಎಂದು ನ್ಯಾಯಾಲಯ ಮತ್ತು ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿ ದಾವೆ ನಂ.27/1886 ಮತ್ತು ಅಪೀಲು ದಾವೆ ನಂ.31/1888ರಲ್ಲಿ ತೀರ್ಪಾಗಿ ಅಂತಿಮವಾಗಿ ಮುಗಿದಿದೆ ಎಂದು ಮನವಿಯಲ್ಲಿ ಉಲ್ಲೇಖ ಮಾಡಲಾಗಿದೆ.

ಮನವಿ ಪ್ರತಿ

ಕಳೆದ 1998ರಿಂದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಹಕ್ಕು ಸಾಧಿಸುವ ನೆಪದಲ್ಲಿ ಸಂಪುಟ ನರಸಿಂಹಸ್ವಾಮಿ ಮಠದ ಪೀಠಾಧಿಪತಿಗಳು ಕುಕ್ಕೆಯಲ್ಲಿ ನಡೆಯುವ ಚಂಪಾಷಷ್ಠಿ ಬ್ರಹ್ಮರಥೋತ್ಸವದಲ್ಲಿ ದೇವರ ಸವಾರಿ ಮೊದಲು ರಾಜಬಲ್ಲಾಳರು ನೀಡಿದ ಹಕ್ಕು ಎಂದು ದೇವಸ್ಥಾನದ ಗರ್ಭಗುಡಿ ಪ್ರವೇಶ ಹಾಗೂ ಬ್ರಹ್ಮರಥದಲ್ಲಿ ದೇವರೊಂದಿಗೆ ಹತ್ತಿ ಕೂರುವ ಪ್ರಯತ್ನ ಮಾಡುತ್ತಿದ್ದಾರೆ ಆರೋಪಿಸಿದ್ದಾರೆ. ಇದಕ್ಕೆ ಆಸ್ಪದ ನೀಡಬಾರದು ಎಂದು ಕುಕ್ಕೆ ಸುಬ್ರಹ್ಮಣ್ಯ ಹಿತರಕ್ಷಣಾ ವೇದಿಕೆ ವತಿಯಿಂದ ದೇಗುಲದ ಆಡಳಿತಾಧಿಕಾರಿ ಹಾಗೂ ಕಾರ್ಯ ನಿರ್ವಾಹಣಾಧಿಕಾರಿಗಳಿಗೆ ಮನವಿ ನೀಡಲಾಗಿದೆ.

ABOUT THE AUTHOR

...view details