ಕರ್ನಾಟಕ

karnataka

ETV Bharat / state

ತುಳುವನ್ನು ಅಧಿಕೃತ ಭಾಷೆಯನ್ನಾಗಿಸುವಂತೆ ಶಾಸಕ ಹರೀಶ್ ಪೂಂಜಾಗೆ ಮನವಿ

ತುಳು ಭಾಷೆಯನ್ನು ಅಧಿಕೃತ ಭಾಷೆಯನ್ನಾಗಿ ಮಾಡುವ ಸಲುವಾಗಿ ಶಾಸಕ ಹರೀಶ್ ಪೂಂಜರಿಗೆ ಮನವಿ ಮಾಡಲಾಗಿದ್ದು, ತುಳು ಲಿಪಿಯನ್ನು 8 ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಲು ಸರ್ವ ಪ್ರಯತ್ನವನ್ನು ನಾನು ಮಾಡುವ ಭರವಸೆ ನೀಡಿದ್ದಾರೆ.

Appeal for MLA Harish poonja to make Tulu as a official language
ತುಳುವನ್ನು ಅಧಿಕೃತ ಭಾಷೆಯನ್ನಾಗಿಸುವಂತೆ ಶಾಸಕ ಹರೀಶ್ ಪೂಂಜಾಗೆ ಮನವಿ

By

Published : Oct 29, 2020, 3:39 PM IST

ಬೆಳ್ತಂಗಡಿ: ಸಂವಿಧಾನ 347ನೇ ವಿಧಿ ಅನ್ವಯ ತುಳು ಭಾಷೆಯನ್ನು ಅಧಿಕೃತ ಭಾಷೆಯನ್ನಾಗಿ ಮಾಡುವಂತೆ ಶಾಸಕ ಹರೀಶ್ ಪೂಂಜರಿಗೆ ತುಳು ಅಕಾಡಮಿ ಮನವಿ ಮಾಡಿದೆ.

ಈ ಕುರಿತು ಸ್ಪಂದಿಸಿದ ಶಾಸಕ ಹರೀಶ್ ಪೂಂಜ, ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಹಾಗೂ ಆಸಕ್ತರಿಗಾಗಿ ತುಳು ಲಿಪಿ ಕಲಿಕಾ ತರಬೇತಿಗೆ ಚಾಲನೆ ನೀಡುವ ಮೂಲಕ ತುಳು ಲಿಪಿಯನ್ನು 8 ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಲು ಸರ್ವ ಪ್ರಯತ್ನವನ್ನು ನಾನು ಮಾಡುತ್ತೇನೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ತುಳು ಅಕಾಡಮಿಯ ಅಧ್ಯಕ್ಷರಾದ ದಯಾನಂದ್ ಕತ್ತಲ್ ಸಾರ್, ಟೈಮ್ಸ್ ಆಫ್ ಕುಡ್ಲ ಪತ್ರಿಕೆಯ ಸಂಪಾದಕರಾದ ಶಶಿ ರೈ ಬಂಡಿಮಾರ್, ಜೈ ತುಳುನಾಡ್ ಅಧ್ಯಕ್ಷರಾದ ಸುದರ್ಶನ್ ಸುರತ್ಕಲ್, ಪ್ರಧಾನ ಕಾರ್ಯದರ್ಶಿ ಸದಾಶಿವ ಮುದ್ರಾಡಿ ಇತರರು ಉಪಸ್ಥಿತರಿದ್ದರು.

ABOUT THE AUTHOR

...view details