ಮಂಗಳೂರು:ಕರಾವಳಿ ಭಾಗದಲ್ಲಿ ನಡೆಯುವ ವಿವಾಹ ಕಾರ್ಯಕ್ರಮಗಳಲ್ಲಿ ಸಿಹಿ ತಿಂಡಿ ಸಾಮಾನ್ಯವಾಗಿ ನೀಡುತ್ತಾರೆ. ಮದುವೆಗೆ ಬಂದ ನೂರಾರು ಜನರಿಗೆ ಸಿಹಿ ತಿಂಡಿ ನೀಡಬೇಕಾಗಿರುವುದರಿಂದ ಪ್ಲಾಸ್ಟಿಕ್ ಡಬ್ಬವನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಆದರೆ ಮಂಗಳೂರಿನಲ್ಲಿ ನಡೆದ ವಿವಾಹದಲ್ಲಿ ಪ್ಲಾಸ್ಟಿಕ್ ಡಬ್ಬದ ಬದಲಿಗೆ ಅಡಿಕೆ ಹಾಳೆ ಡಬ್ಬ ಬಳಸಿ ಪ್ಲಾಸ್ಟಿಕ್ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯವನ್ನು ವಧು-ವರರು ಮಾಡಿದರು.
ಪ್ಲಾಸ್ಟಿಕ್ ವಿರುದ್ಧ ಜಾಗೃತಿ ಮೂಡಿಸಿದ ಮದುವೆ: ಸಿಹಿ ತಿಂಡಿ ವಿತರಣೆಗೆ ಅಡಿಕೆ ಹಾಳೆ ಬಾಕ್ಸ್ ಬಳಕೆ - Anti-Plastic Awareness Marriage
ವಧು-ವರರು ಅಡಿಕೆ ಹಾಳೆ ಬಾಕ್ಸ್‌ಗಳಲ್ಲಿ ತಮ್ಮ ಮದುವೆಯ ಸಿಹಿ ತಿಂಡಿ ನೀಡಲು ಬಯಸಿದ್ದು, ಇದೊಂದು ಪ್ಲಾಸ್ಟಿಕ್ ವಿರುದ್ಧ ಜಾಗೃತಿ ಮೂಡಿಸುವ ಸಮಾರಂಭವಾಗಿ ಮಾರ್ಪಟ್ಟಿತ್ತು.
ಪ್ಲಾಸ್ಟಿಕ್ ವಿರೋಧಿ ಜಾಗೃತಿ ಮೂಡಿಸಿದ ಮದುವೆ
ಪ್ಲಾಸ್ಟಿಕ್ ಬದಲಾಗಿ ಪರಿಸರ ಸ್ನೇಹಿಯಾದ ಅಡಿಕೆ ಹಾಳೆಯಿಂದ ತಯಾರಿಸಿದ ಬಾಕ್ಸ್‌ಗಳಲ್ಲಿ ಸಿಹಿ ತಿಂಡಿಯನ್ನು ನೀಡಲಾಯಿತು. ನೇಹಾ ಹಾಗೂ ವಿನಾಯಕ್ ಎಂಬುವವರ ವಿವಾಹ ಸಮಾರಂಭದಲ್ಲಿ ಮಂಗಳೂರು ಶಾಸಕ ವೇದವ್ಯಾಸ ಕಾಮತ್ ಭಾಗವಹಿಸಿದ್ದರು. ಅಡಿಕೆ ಹಾಳೆಯಿಂದ ಸ್ವೀಟ್ ಬಾಕ್ಸ್ ಮಾಡಿರುವ ಬಗ್ಗೆ ಖುಷಿಗೊಂಡ ವೇದವ್ಯಾಸ್ ಕಾಮತ್, ಈ ಕುರಿತು ಟ್ವೀಟ್ ಮಾಡಿ ಶ್ಲಾಘಿಸಿದ್ದಾರೆ.