ಕರ್ನಾಟಕ

karnataka

ETV Bharat / state

ಕಾರು ಮಾರಾಟ ಪ್ರಕರಣ: ಮತ್ತಿಬ್ಬರು ಪೊಲೀಸ್ ಸಿಬ್ಬಂದಿ ಅಮಾನತು - ccb police suspended

ಐಷಾರಾಮಿ ಕಾರು ಮಾರಾಟ ಪ್ರಕರಣಕ್ಕೆ ಸಿಸಿಬಿ ಪೊಲೀಸ್ ಸಿಬ್ಬಂದಿಯಾದ ಆಶಿತ್ ಡಿಸೋಜ ಮತ್ತು ರಾಜಾ ಅವರನ್ನು ಅಮಾನತು ಮಾಡಲಾಗಿದೆ.

another two suspended in car sale case
ಕಾರು ಮಾರಾಟ ಪ್ರಕರಣ: ಮತ್ತಿಬ್ಬರು ಪೊಲೀಸ್ ಸಿಬ್ಬಂದಿ ಅಮಾನತು

By

Published : Mar 2, 2021, 3:18 AM IST

ಮಂಗಳೂರು: ಐಷಾರಾಮಿ ಕಾರು ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಸಿಸಿಬಿ ಪೊಲೀಸ್ ಸಿಬ್ಬಂದಿಯಾದ ಆಶಿತ್ ಡಿಸೋಜ ಮತ್ತು ರಾಜಾ ಅವರನ್ನು ಅಮಾನತು ಮಾಡಿ ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಆದೇಶಿಸಿದ್ದಾರೆ.

ಎರಡು ದಿನಗಳ ಹಿಂದೆಯಷ್ಟೇ ಸಿಸಿಬಿಯಲ್ಲಿ ಎಸ್ಐ ಆಗಿದ್ದ ಕಬ್ಬಾಳ್ ರಾಜ್ ಹಾಗೂ ಎಕನಾಮಿಕ್, ನಾರ್ಕೊಟಿಕ್ ಹಾಗೂ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ರಾಮಕೃಷ್ಣ ಅವರನ್ನು ಅಮಾನತು ಮಾಡಲಾಗಿತ್ತು.

ಇದನ್ನೂ ಓದಿ:ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲು ಸಿದ್ದವಾದ ಹಳ್ಳಿಹಕ್ಕಿ..!

ಕಾರು ಮಹಜರು ಹೊಣೆಯನ್ನು ಮಂಗಳೂರು ದಕ್ಷಿಣ ಎಸಿಪಿ, ಐಪಿಸಿ ಅಧಿಕಾರಿ ರಂಜಿತ್ ಬಂಡಾರು ಅವರಿಗೆ ವಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಆಯುಕ್ತರ ಕಚೇರಿ ಬಳಿ‌ ನಿಲ್ಲಿಸಿರುವ ಎರಡು ಕಾರುಗಳನ್ನು ರಂಜಿತ್ ಬಂಡಾರು ನೇತೃತ್ವದಲ್ಲಿ ಆರೋಪಿಗಳ ಸಮ್ಮುಖದಲ್ಲಿ ಮಹಜರು ನಡೆಸಲಾಗಿದೆ.

ಅಲ್ಲದೆ ಹಣ ವಂಚನೆ ಪ್ರಕರಣದ ಆರೋಪಿಗಳಾದ ಮ್ಯಾಥ್ಯೂ ಹಾಗೂ ರಾಜನ್​​ರನ್ನು ಕರೆಸಿ ಖುದ್ದಾಗಿ ಅವರ ಸಮ್ಮುಖದಲ್ಲೇ ಎಸಿಪಿ ರಂಜಿತ್ ಬಂಡಾರು ಕಾರು ಮಹಜರು ನಡೆಸಿದ್ದಾರೆ.

ABOUT THE AUTHOR

...view details