ಕರ್ನಾಟಕ

karnataka

ವೆನ್ಲಾಕ್​ ಆಸ್ಪತ್ರೆ, ಪೊಲೀಸರಿಗೆ 1.5 ಕೋಟಿ ರೂ. ಮೌಲ್ಯದ ವೈದ್ಯಕೀಯ ಉಪಕರಣ ಕೊಟ್ಟ ಇನ್ಫೋಸಿಸ್​

By

Published : May 20, 2020, 9:02 PM IST

ವೆನ್ಲಾಕ್ ಜಿಲ್ಲಾಸ್ಪತ್ರೆಗೆ 76 ಲಕ್ಷ ರೂ. ಮೌಲ್ಯದ 5 ವೆಂಟಿಲೇಟರ್, ಪಿಪಿಇ ಕಿಟ್, ಥರ್ಮಾಮೀಟರ್ ಮತ್ತು ಇತರೆ ವೈದ್ಯಕೀಯ ಸಲಕರಣೆ ನೀಡಲಾಯಿತು. ಪೊಲೀಸ್ ಆಯುಕ್ತರ ಕಚೇರಿಗೆ 58 ಲಕ್ಷ ರೂ. ಪಿಪಿಇ ಕಿಟ್ ಮತ್ತು ಸ್ಯಾನಿಟೈಸರ್​​ ಹಾಗೂ 16 ಲಕ್ಷ ರೂ. ಮೌಲ್ಯದ 2,000 ಡ್ರೈ ರೇಷನ್ ಕಿಟ್‍ಗಳನ್ನು ಇನ್ಫೋಸಿಸ್ ಫೌಂಡೇಷನ್ ಹಸ್ತಾಂತರಿಸಿತು.

ಇನ್ಫೋಸಿಸ್​​ನಿಂದ ಮತ್ತೊಂದು ಮಹತ್ತರ ಕಾರ್ಯ
ಇನ್ಫೋಸಿಸ್​​ನಿಂದ ಮತ್ತೊಂದು ಮಹತ್ತರ ಕಾರ್ಯ

ಮಂಗಳೂರು:ನಗರದ ವೆನ್ಲಾಕ್ ಆಸ್ಪತ್ರೆ ಮತ್ತು ಪೊಲೀಸ್ ಆಯುಕ್ತರ ಕಚೇರಿಗೆ 1.50 ಕೋಟಿ ರೂ. ಮೌಲ್ಯದ ವೈದ್ಯಕೀಯ ಉಪಕರಣಗಳನ್ನು ಇನ್ಫೋಸಿಸ್​ ಫೌಂಡೇಷನ್​ ಹಸ್ತಾಂತರಿಸಿತು.

ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಲ್ಲಿ ಉಪಕರಣಗಳನ್ನು ಹಸ್ತಾಂತರಿಸಲಾಯಿತು. ವೆನ್ಲಾಕ್ ಜಿಲ್ಲಾಸ್ಪತ್ರೆಗೆ 76 ಲಕ್ಷ ರೂ. ಮೌಲ್ಯದ 5 ವೆಂಟಿಲೇಟರ್, ಪಿಪಿಇ ಕಿಟ್, ಥರ್ಮಾಮೀಟರ್ ಮತ್ತು ಇತರೆ ವೈದ್ಯಕೀಯ ಸಲಕರಣೆ ನೀಡಲಾಯಿತು. ಪೊಲೀಸ್ ಆಯುಕ್ತರ ಕಚೇರಿಗೆ 58 ಲಕ್ಷ ರೂ. ಪಿಪಿಇ ಕಿಟ್ ಮತ್ತು ಸ್ಯಾನಿಟೈಸರ್​​ ಹಾಗೂ 16 ಲಕ್ಷ ರೂ. ಮೌಲ್ಯದ 2,000 ಡ್ರೈ ರೇಷನ್ ಕಿಟ್‍ಗಳನ್ನು ವಿತರಣೆ ಮಾಡಿದರು.

ಇನ್ಫೋಸಿಸ್ ಕೇಂದ್ರದ ಮುಖ್ಯಸ್ಥ ವ್ಯಾಸದೇವ ಕಾಮತ್, ಇನ್ಫೋಸಿಸ್ ಕ್ರಾಂತಿ ಮುಖ್ಯಸ್ಥ ಹರೀಶ್, ಜಿಲ್ಲಾ ವ್ಯವಸ್ಥಾಪಕ ಡಾ. ಕಿಶೋರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಚಂದ್ರ ಬಾಯರಿ, ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿಯ ಅಧ್ಯಕ್ಷ ರವೀಂದ್ರ ಕಂಬಳಿ, ಜಿ.ಪಂ. ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ ಮತ್ತಿತರರು ಉಪಸ್ಥಿತರಿದ್ದರು.

ABOUT THE AUTHOR

...view details